Publish Date: Thu, 05 Nov 2020 (09:19 IST)
Updated Date: Thu, 05 Nov 2020 (09:22 IST)
ಬೆಂಗಳೂರು: ಕೊರೋನಾ ಬಳಿಕ ಕಿರುತೆರೆಯಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ಅದರಲ್ಲೂ ಧಾರವಾಹಿಗಳೆಂದರೆ ರೊಮ್ಯಾನ್ಸ್ ದೃಶ್ಯಗಳಿಗೇನೂ ಕಡಿಮೆಯಿಲ್ಲ. ಆದರೆ ಲಾಕ್ ಡೌನ್ ಬಳಿಕ ಎಲ್ಲಾ ಧಾರವಾಹಿಗಳಲ್ಲೂ ಇಂತಹ ದೃಶ್ಯಗಳು ಬಹುತೇಕ ಕಡಿಮೆಯಾಗಿದೆ.
ಕಿಸ್ಸಿಂಗ್ ಸೀನ್, ಇಂಟಿಮೇಟ್ ದೃಶ್ಯಗಳಿಗೆ ಕೊರೋನಾ ದೃಷ್ಟಿಯಿಂದ ಕೇಂದ್ರವೇ ಕೊಂಚ ಮಟ್ಟಿಗೆ ಕಡಿವಾಣ ಹಾಕಿದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಇತ್ತೀಚೆಗೆ ಧಾರವಾಹಿಗಳಲ್ಲೂ ಇಂತಹ ದೃಶ್ಯಗಳನ್ನು ಅವಾಯ್ಡ್ ಮಾಡಲಾಗುತ್ತಿದೆ. ಅನಿವಾರ್ಯವಾದರೆ ಮಾತ್ರ ತಬ್ಬಿಕೊಳ್ಳುವ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದೆ. ಅಂತೂ ಕೊರೋನಾದಿಂದ ಪ್ರೇಕ್ಷಕರಿಗೆ ತೆರೆ ಮೇಲೆ ತಮ್ಮ ನೆಚ್ಚಿನ ನಟರ ರೊಮ್ಯಾನ್ಸ್ ನೋಡುವ ಭಾಗ್ಯವಿಲ್ಲದಂತಾಗಿದೆ!