ಚೆನ್ನೈ : ಎಸ್.ಪಿ.ಜಗನ್ನಾಥ್ ನಿರ್ದೇಶನದ ಲಾಭಂ ದಲ್ಲಿ ನಟ ವಿಜಯ್ ಸೇತಪತಿ ಹಾಗೂ ಶ್ರುತಿ ಹಾಶನ್ ಅವರು ನಟಿಸುತ್ತಿದ್ದಾರೆ. ಆದರೆ ವಿಜಯ್ ಸೇತುಪತಿಯ ಕಾರಣದಿಂದ ಚಿತ್ರದ ಶೂಟಿಂಗ್ ವೇಳೆ ನಟಿ ಶ್ರುತಿ ಹಾಸನ್ ಚಿತ್ರೀಕರಣವನ್ನು ಅರ್ಧದಲ್ಲೇ ಬಿಟ್ಟು ಹೊರಹೋಗಿದ್ದಾರೆ ಎನ್ನಲಾಗಿದೆ.
ಈ ಚಿತ್ರದ ಟೀಸರ್ ಕೆಲವು ತಿಂಗಳ ಹಿಂದೆ ಬಿಡುಗಡೆಯಾಗಿತ್ತು. ಅಭಿಮಾನಿಗಳಿಂದ ುತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿತ್ತು. ಕೊರೊನಾ ಕಾರಣದಿಂದ ಸ್ಥಗಿತಗೊಂಡಿದ್ದ ಚಿತ್ರೀಕರಣ ಮತ್ತೆ ಶುರುವಾಗಿತ್ತು.
ಆದರೆ ಚಿತ್ರಕರಣದ ವೇಳೆ ವಿಜಯ್ ಸೇತುಪತಿ ತಮ್ಮನ್ನು ನೋಡಲು ಬಂದ ಅಭಿಮಾನಿಗಳನ್ನು ತಬ್ಬಿಕೊಂಡಿದ್ದಾರೆ. ಕೊರೊನಾ ಅವಧಿಯಲ್ಲಿ ಶ್ರುತಿ ಹಾಸನ್ ವಿಜಯ್ ಸೇತುಪತಿ ಹೀಗೆ ಮಾಡಿದ್ದನ್ನು ನೋಡಿ ಇವರೊಂದಿಗೆ ನಟಿಸುವುದರಿಂದ ಕೊರೊನಾ ಸೋಂಕಿಗೆ ಒಳಗಾಗುವ ಭಯದಿಂದ ಚಿತ್ರೀಕರಣ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.