Publish Date: Sat, 21 Nov 2020 (13:30 IST)
Updated Date: Sat, 21 Nov 2020 (13:32 IST)
ಹೈದರಾಬಾದ್ : ಈ ಹಿಂದೆ ಒರಟಾದ ಗಡ್ಡ ಬಿಟ್ಟುಕೊಂಡಿದ್ದ ನಟ ಪವನ್ ಕಲ್ಯಾಣ್ ಇದೀಗ ಕ್ಲೀನ್ ಶೇವ್ ಮಾಡಿಕೊಂಡು ಹ್ಯಾಂಡ್ ಸಮ್ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ ಇದಕ್ಕೆ ಕಾರಣವೇನೆಂಬ ಬಗ್ಗೆ ಚರ್ಚೆ ನಡೆಯುತ್ತಿದೆ.
ಪವನ್ ಕಲ್ಯಾಣ್ ವಕೀಲ್ ಸಾಬ್ ಚಿತ್ರಕ್ಕಾಗಿ ಗಡ್ಡ ಬಿಟ್ಟುಕೊಂಡಿದ್ದರು. ಆದರೆ ಈ ನಡುವೆ ಚುನಾವಣಾ ಅಧಿಸೂಚನೆ ಬಂದಿದ್ದು, ಜನಸೇನಾ ಪಕ್ಷದ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧ ಎಂದು ಘೋಷಿಸಿದ್ದಾರೆ. ಹಾಗಾಗಿ ಸಿನಿಮಾಕ್ಕೆ ವಿದಾಯ ಹೇಳಿ ಚುನಾವಣೆಯ ಕಡೆ ಗಮನಹರಿಸಲಿದ್ದಾರೆ ಎಂದು ಹಲವರ ಅಭಿಪ್ರಾಯ.
ಹಾಗೇ ಇನ್ನೂ ಕೆಲವರು ಪವನ್ ಕಲ್ಯಾಣ್ ಮುಂದಿನ ಚಿತ್ರದಲ್ಲಿ ನಟಿಸಲು ಈಗಲೇ ಸಿದ್ದರಾಗಿದ್ದು, ಅದಕ್ಕಾಗಿ ಕ್ಲೀನ್ ಶೇವ್ ಮಾಡಿದ್ದಾರೆ ಎಂದು ಚರ್ಚಿಸುತ್ತಿದ್ದಾರೆ ಎನ್ನಲಾಗಿದೆ.