Select Your Language

Notifications

webdunia
webdunia
webdunia
webdunia

ಧಾರವಾಹಿಯಲ್ಲಿ ನಟಿಸಿದ ಬಿಜೆಪಿ ಶಾಸಕ ರವಿ ಸುಬ್ರಮಣ್ಯ

ಧಾರವಾಹಿಯಲ್ಲಿ ನಟಿಸಿದ ಬಿಜೆಪಿ ಶಾಸಕ ರವಿ ಸುಬ್ರಮಣ್ಯ
ಬೆಂಗಳೂರು , ಬುಧವಾರ, 18 ನವೆಂಬರ್ 2020 (09:36 IST)
ಬೆಂಗಳೂರು: ರಾಜಕಾರಣಿಗಳಿಗೂ ಬಣ್ಣದ ಲೋಕಕ್ಕೂ ನಂಟಿರುವುದು ಹೊಸತೇನಲ್ಲ. ಬಿಜೆಪಿ ಶಾಸಕ ರವಿ ಸುಬ್ರಮಣ್ಯ ಈಗ ಜನಪ್ರಿಯ ಧಾರವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.


ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರವಾಹಿಯಲ್ಲಿ ಶಾಸಕ ರವಿ ಸುಬ್ರಮಣ್ಯ ಶಾಸಕರಾಗಿಯೇ ಕಾಣಿಸಿಕೊಂಡಿದ್ದು, ನಗರ ಸ್ವಚ್ಛತೆ ಬಗ್ಗೆ ಮಾತನಾಡಿದ್ದಾರೆ. ಧಾರವಾಹಿಯಲ್ಲಿ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮವೊಂದರ ದೃಶ್ಯವೊಂದು ಇದ್ದು, ಈ ದೃಶ್ಯದಲ್ಲಿ ಕಸ ಬೇರ್ಪಡಿಸುವ ಕುರಿತು, ನಗರವನ್ನು ಸ್ವಚ್ಛಗೊಳಿಸುವ ಕುರಿತು ಹೇಳಲಾಗಿದೆ. ಈ ಸಂದರ್ಭದಲ್ಲಿ ಸ್ಥಳೀಯ ಶಾಸಕರಾಗಿ ರವಿ ಸುಬ್ರಮಣ್ಯ ಆಗಮಿಸಿ ಮಾತನಾಡಿದ್ದಾರೆ. ಈ ಕಂತು ಇಂದು ಪ್ರಸಾರವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ವಿಚಾರಕ್ಕೆ ಕಣ್ಣೀರು ಸುರಿಸಿದ ನಟ ಶ್ರೀಹರಿ ಪತ್ನಿ ಡಿಸ್ಕೋ ಶಾಂತಿ