Select Your Language

Notifications

webdunia
webdunia
webdunia
webdunia

ಮತ್ತೆ ಕಿರುತೆರೆ ನಟನೆಗೆ ಮರಳಿದ ‘ಪುಟ್ಟಗೌರಿ’ ರಂಜಿನಿ ರಾಘವನ್

ಮತ್ತೆ ಕಿರುತೆರೆ ನಟನೆಗೆ ಮರಳಿದ ‘ಪುಟ್ಟಗೌರಿ’ ರಂಜಿನಿ ರಾಘವನ್
ಬೆಂಗಳೂರು , ಗುರುವಾರ, 26 ಡಿಸೆಂಬರ್ 2019 (08:03 IST)
ಬೆಂಗಳೂರು: ಪುಟ್ಟಗೌರಿ ಮದುವೆ ಧಾರವಾಹಿ ಮೂಲಕ ಮನೆ ಮಾತಾಗಿದ್ದ ನಟಿ ರಂಜಿನಿ ರಾಘವನ್ ಬಳಿಕ ಸ್ಯಾಂಡಲ್ ವುಡ್ ನಲ್ಲಿ  ಹಾರಿದ್ದರು. ಇದೀಗ ಮತ್ತೆ ರಂಜಿನಿ ಧಾರವಾಹಿಗೆ ಮರಳುತ್ತಿದ್ದಾರೆ.


ಇದರ ನಡುವೆ ರಂಜಿನಿ ಧಾರವಾಹಿಯೊಂದಕ್ಕೆ ಸ್ಟ್ರಿಪ್ಟ್ ಬರೆಯುವ ಕೆಲಸ ಮಾಡಿದ್ದರು. ಅದಾದ ಬಳಿಕ ರಂಜಿನಿ ಮತ್ತೆ ಸಿನಿಮಾದಲ್ಲಿ ಬ್ಯುಸಿಯಾದರು.

ಇದೀಗ ಕಲರ್ಸ್ ಕನ್ನಡದ ಹೊಸ ಧಾರವಾಹಿಯೊಂದಕ್ಕೆ ನಾಯಕಿಯಾಗುತ್ತಿದ್ದಾರೆ. ಈಗಾಗಲೇ ಜನಪ್ರಿಯವಾಗಿರುವ ಲಕ್ಷ್ಮೀ ಬಾರಮ್ಮಾ ಧಾರವಾಹಿ ತಂಡ ನಿರ್ಮಿಸುತ್ತಿರುವ ಮತ್ತೊಂದು ಹೊಸ ಧಾರವಾಹಿ ‘ಕನ್ನಡತಿ’ಯಲ್ಲಿ ರಂಜಿನಿ ನಾಯಕಿಯಾಗುತ್ತಿದ್ದಾರೆ. ರಂಜಿನಿಗೆ ನಾಯಕನಾಗಿ ಕಿನ್ನರಿ ಧಾರವಾಹಿ ಖ್ಯಾತಿಯ ಕಿರಣ್ ಅಭಿನಯಿಸಲಿದ್ದಾರೆ. ಸದ್ಯದಲ್ಲೇ ಧಾರವಾಹಿ ಪ್ರಸಾವರಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಿಚ್ಚ ಸುದೀಪ್ ಗೆ ಸಲ್ಮಾನ್ ಖಾನ್ ಕೊಟ್ಟ ಆ ಜಾಕೆಟ್ ಸ್ಪೆಷಲ್ ಯಾಕೆ ಗೊತ್ತಾ?