Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ವಿವಾಹ ಪೂರ್ವ ಅತ್ಯಾಚಾರ! ಠಾಣೆ ಮೆಟ್ಟಿಲೇರಿದ ನಟಿ

webdunia
ಬುಧವಾರ, 10 ನವೆಂಬರ್ 2021 (13:04 IST)
ಬೆಂಗಳೂರು : ಕಿರುತೆರೆ ನಟಿಯೋರ್ವರು ತಮ್ಮ ಮೇಲೆ ಪತಿ ವಿವಾಹಪೂರ್ವ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಈ ಕುರಿತು ದೂರು ಕೂಡ ದಾಖಲಾಗಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಕಿರುತೆರೆ ನಟಿಯೋರ್ವರು ತಮ್ಮ ಪತಿ ವಿರುದ್ಧ ಮದುವೆಗೂ ಮುನ್ನ ಅತ್ಯಾಚಾರ ಎಸಗಿದ ಆರೋಪ ಮಾಡಿದ್ದು ಜೊತೆಗೆ ಮದುವೆ ಬಳಿಕ ವರದಕ್ಷಿಣೆಗೆ ಕಿರುಕುಳ ನೀಡಿದ್ದಾರೆ ಎಂದೂ ಆರೋಪಿಸಿದ್ದಾರೆ. ಪತಿ ಸಂಬಂಧಿಕರು, ಪೋಷಕರ ವಿರುದ್ಧ ಹಲ್ಲೆ, ನಿಂದನೆ, ಕೊಲೆ ಬೆದರಿಕೆ ಆರೋಪವನ್ನೂ ಮಾಡಲಾಗಿದೆ. ಈ ಕುರಿತು ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ?
ಕಿರುತೆರೆ ನಟಿ ನೀಡಿರುವ ದೂರಿನ ಪ್ರಕಾರ, ಸಾಮಾಜಿಕ ಜಾಲತಾಣದಲ್ಲಿ ದಂಪತಿ ಪರಿಚಯವಾಗಿದ್ದರು. ಬಳಿಕ ಗ್ರಾಮೀಣ ಪ್ರತಿಭೆ ಬೆಳೆಯಬೇಕೆಂದು ಆತ ಹತ್ತಿರವಾಗಿದ್ದ. ಒಂದು ದಿನ ಏಕಾಏಕಿ ಭೇಟಿ ಮಾಡುವುದಕ್ಕೆಂದು ಕರೆದಿದ್ದ. ಕೊರೊನಾ ಹಿನ್ನೆಲೆ ಹೊರಗೆ ಭೇಟಿಯಾಗಲು ಕಷ್ಟವೆಂದು, ಮನೆಯಲ್ಲಿ ಭೇಟಿಯಾಗಲು ಕರೆದಿದ್ದ. ಮನೆಗೆ ಹೋದಾಗ ಅತ್ಯಾಚಾರವೆಸಗಲಾಗಿದೆ. ಮನೆಯಲ್ಲಿ ಅಳುತ್ತಿದ್ದಾಗ ಮದುವೆ ಮಾಡಿಕೊಳ್ಳುವ ಭರವಸೆ ನೀಡಿ, ಮದುವೆಯಾದ್ರೆ ಸರಿಯಾಗುತ್ತೆ ಎಂದು ಆರೋಪಿ ಪತಿ ಹೇಳಿದ್ದ. ಇದಾದ ಬಳಿಕ ಹಲವು ಬಾರಿ ಇದೇ ರೀತಿ ಬೇಡವೆಂದು ಹೇಳಿದರೂ ಕೇಳದೆ ಅತ್ಯಾಚಾರ ಮಾಡಲಾಗಿದೆ ಎಂದು  ಆರೋಪಿಸಲಾಗಿದೆ.
ಕೆಲ ತಿಂಗಳ ಬಳಿಕ ಸಂತ್ರಸ್ತೆ ಮದುವೆಯಾಗುವಂತೆ ಕೇಳಿದ್ದರು. ಈ ವೇಳೆ ನಿಧಾನವಾಗಿ ದೂರವಾಗಲು ಆರೋಪಿ ಯತ್ನಿಸಿದ್ದಾನೆ. ಗಲಾಟೆ ಮಾಡಿದಾಗ ಮದುವೆಗೆ ನಿರಾಕರಣೆ ಮಾಡಿದ್ದ. ಗೆಳೆಯನ ಜತೆ ದೇಗುಲದಲ್ಲಿ ಮಾತುಕತೆ ವೇಳೆ ತಾಳಿ ಕಟ್ಟಿದ್ದ. ಬಳಿಕ ಅವರ ಮನೆಗೆ ಹೋದಾಗ ಮದುವೆ ಆಗಿಲ್ಲ, ಬಲವಂತವಾಗಿ ತಾಳಿ ಕಟ್ಟಿಸಿದ್ದರೆಂದು ಆರೋಪಿ ಪತಿ ಹೇಳಿದ್ದ. ಇದೇ ವಿಚಾರವಾಗಿ ಗಲಾಟೆ ಹಿನ್ನೆಲೆ ದೂರು ದಾಖಲಿಸಿದ್ದೆ. ಅವರ ಮನೆಯಲ್ಲಿ ವರದಕ್ಷಿಣೆ ತರುವಂತೆ ಒತ್ತಾಯಿಸಿದ್ದರು. ನನ್ನ ಜಾತಿಯನ್ನು ನಿಂದಿಸಿದ್ದರು. ತನ್ನ ಗೌರವಕ್ಕೆ ಧಕ್ಕೆ ಆಗುವಂತೆ ಮಾತಾಡಿದ್ದರು. ಆರೋಪಿ ಪತಿ ತಂದೆ ಕೊಲೆ ಮಾಡಿ ರೈಲ್ವೆ ಹಳಿ ಮೇಲೆ ಹಾಕುವುದಾಗಿ ಬೆದರಿಸಿದ್ದ. ಈ ಎಲ್ಲಾ ಪ್ರಕರಣಗಳನ್ನು ಉಲ್ಲೇಖಿಸಿ, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಸಂತ್ರಸ್ತೆ ಬಸವನಗುಡಿ ಮಹಿಳಾ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.


ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಜೈಲಿನಿಂದ ಹೊರಬಂದ ಮೇಲೆ ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಬಿದ್ದ ರಾಜ್ ಕುಂದ್ರಾ