Publish Date: Wed, 10 Nov 2021 (12:15 IST)
Updated Date: Wed, 10 Nov 2021 (09:02 IST)
ಮುಂಬೈ: ಪೋರ್ನ್ ವಿಡಿಯೋ ಮೇಕಿಂಗ್ ಪ್ರಕರಣದಲ್ಲಿ ಜೈಲು ಪಾಲಾಗಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
ಜೈಲಿನಿಂದ ಬಂದ ಮೇಲೆ ರಾಜ್ ಕುಂದ್ರಾ ಹೊರಗೆಲ್ಲೂ ಓಡಾಡುತ್ತಿರಲಿಲ್ಲ. ಶಿಲ್ಪಾ ಮಾತ್ರ ತಮ್ಮ ಸಹಜ ಜೀವನದಲ್ಲಿ ತೊಡಗಿಸಿಕೊಂಡಿದ್ದರು.
ಆದರೆ ಈಗ ರಾಜ್ ತಮ್ಮ ಪತ್ನಿ ಜೊತೆಗೆ ಸಾಂಪ್ರದಾಯಿಕ ಉಡುಗೆಯಲ್ಲಿ ಧರ್ಮಶಾಲಾದ ದೇವಾಲಯವೊಂದಕ್ಕೆ ತೆರಳಿ ಪೂಜೆ ಸಲ್ಲಿಸುವ ದೃಶ್ಯಗಳು ವೈರಲ್ ಆಗಿದೆ. ಜೈಲಿಂದ ಬಂದ ಮೇಲೆ ಇದೇ ಮೊದಲ ಬಾರಿಗೆ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.