ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕನ್ನಡತಿ ಧಾರವಾಹಿ ಮುಕ್ತಾಯವಾಗಿದೆ. ಈ ಧಾರವಾಹಿಯ ನಾಯಕ ಹರ್ಷ ಅಲಿಯಾಸ್ ಕಿರಣ್ ರಾಜ್ ಮನೆ ಮಾತಾಗಿದ್ದರು.
ಈ ಧಾರವಾಹಿ ಮುಗಿದಿದ್ದು ಎಷ್ಟೋ ಜನರಿಗೆ ಬೇಸರ ತಂದಿದೆ. ಇದರ ನಡುವೆ ಮತ್ತೊಂದು ಬೇಸರದ ಸಂಗತಿಯಿದೆ. ಈ ಧಾರವಾಹಿ ಮುಗಿದ ಬಳಿಕ ಕಿರಣ್ ರಾಜ್ ನಾಯಕಿ ರಂಜಿನಿ ರಾಘವನ್ ಜೊತೆ ಇನ್ ಸ್ಟಾಗ್ರಾಂನಲ್ಲಿ ಲೈವ್ ಬಂದಿದ್ದರು.
ಈ ವೇಳೆ ಸದ್ಯಕ್ಕೆ ತಾವು ಕಿರುತೆರೆಯಿಂದ ಬ್ರೇಕ್ ಪಡೆಯುತ್ತಿರುವುದಾಗಿ ಹೇಳಿದ್ದಾರೆ. ಇನ್ನು ಮುಂದೆ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳುವುದಾಗಿ ಕಿರಣ್ ಹೇಳಿದ್ದಾರೆ. ಇದು ಅವರ ಕಿರುತೆರೆ ಅಭಿಮಾನಿಗಳಿಗೆ ಬೇಸರ ತಂದಿದೆ.