Select Your Language

Notifications

webdunia
webdunia
webdunia
webdunia

ಗಟ್ಟಿಮೇಳ ಧಾರವಾಹಿಯ ಅಜ್ಜಿ ಕಮಲಶ್ರೀ ಇನ್ನಿಲ್ಲ

Gattimela actress

Krishnaveni K

ಬೆಂಗಳೂರು , ಬುಧವಾರ, 1 ಅಕ್ಟೋಬರ್ 2025 (09:03 IST)
ಬೆಂಗಳೂರು: ಗಟ್ಟಿಮೇಳ ಧಾರವಾಹಿಯಲ್ಲಿ ಅಜ್ಜಿ ಪಾತ್ರ ಮಾಡುತ್ತಿದ್ದ ಹಿರಿಯ ನಟಿ ಕಮಲಶ್ರೀ ಇಹಲೋಕ ತ್ಯಜಿಸಿದ್ದಾರೆ. ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರಿಗೆ 70 ವರ್ಷವಾಗಿತ್ತು.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗಟ್ಟಿಮೇಳ ಧಾರವಾಹಿಯಲ್ಲಿ ನಾಯಕನ ಅಜ್ಜಿ ಪಾತ್ರ ಮಾಡುತ್ತಿದ್ದ ಅವರು ಜನರಿಗೆ ಚಿರಪರಿಚಿತರಾಗಿದ್ದರು. ಈ ಇಳಿ ವಯಸ್ಸಿನಲ್ಲೂ ತಾವೇ ದುಡಿದು ತಮ್ಮ ಜೀವನ ನಡೆಸುತ್ತಿದ್ದರು.

ಆದರೆ ಕಳೆದ ಕೆಲವು ಸಮಯದಿಂದ ಅವರು ಸ್ತನ ಕ್ಯಾನ್ಸರ್ ಗೆ ತುತ್ತಾಗಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ತೀರಾ ಇತ್ತೀಚೆಗಿನವರೆಗೂ ಅವರು ಧಾರವಾಹಿಗಳಲ್ಲಿ ಸಕ್ರಿಯರಾಗಿದ್ದರು.

ಆದರೆ ತೀರಾ ಅನಾರೋಗ್ಯಕ್ಕೀಡಾದ ಬಳಿಕ ಧಾರವಾಹಿಗಳಿಂದ ದೂರವಾಗಿದ್ದರು. ಜೀ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ತಮ್ಮ ಜೀವನದ ಕಷ್ಟಗಳನ್ನು ಹೇಳಿ ಕಣ್ಣೀರು ಹಾಕಿದ್ದರು. ಈ ವಯಸ್ಸಿನಲ್ಲೂ ತಾವೇ ದುಡಿಯುತ್ತಿರುವುದಾಗಿ ಹೇಳಿಕೊಂಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂತಾರ 2 ಸಿನಿಮಾ ಮುಂಗಡ ಬುಕ್ಕಿಂಗ್‌ನಲ್ಲಿ ಹೊಸ ದಾಖಲೆ