ಬೆಂಗಳೂರು: ಈ ವಾರದ ಕಿರುತೆರೆಯ ಟಿಆರ್ ಪಿ ಲಿಸ್ಟ್ ಬಿಡುಗಡೆಯಾಗಿದ್ದು, ಬಿಗ್ ಬಾಸ್ ಶೋವನ್ನೂ ಹಿಂದಿಕ್ಕಿ ಈ ವಾರ ಈ ಒಂದು ಶೋ ಕಲರ್ಸ್ ವಾಹಿನಿಯ ನಂ.1 ಶೋ ಆಗಿದೆ.
ಕಲರ್ಸ್ ವಾಹಿನಿಯಲ್ಲಿ ಬಿಗ್ ಬಾಸ್ ಕನ್ನಡ ಆರಂಭವಾದ ಬಳಿಕ ಟಿಆರ್ ಪಿಯಲ್ಲಿ ನಂ.1 ಆಗಿ ಮುನ್ನುಗ್ಗುತ್ತಿತ್ತು. ಈ ಬಾರಿ ಬಿಗ್ ಬಾಸ್ ದಾಖಲೆಯ ಟಿಆರ್ ಪಿಯನ್ನು ಕಂಡಿತ್ತು. ಆದರೆ ಅಚ್ಚರಿಯೆಂದರೆ ಈ ವಾರ ಬಿಗ್ ಬಾಸ್ ಶೋವನ್ನೂ ಹಿಂದಿಕ್ಕಿದ ಕಲರ್ಸ್ ನ ಈ ಶೋ ನಂ.1 ಆಗಿದೆ.
ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮಾ ಧಾರವಾಹಿ ಈ ವಾರದ ನಂ.1 ಶೋ ಆಗಿದೆ. ಹಲವು ದಿನಗಳ ಬಳಿಕ ಕಲರ್ಸ್ ವಾಹಿನಿಯ ಧಾರವಾಹಿ ನಂಬರ್ 1 ಸ್ಥಾನಕ್ಕೇರಿರುವುದು ವಿಶೇಷ. ಬ್ರೋ ಗೌಡ, ಭೂಮಿಕಾ ರಮೇಶ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ಈ ಧಾರವಾಹಿ ಈಗ ಕೋರ್ಟ್ ರೂಂ ಸೀನ್ ಗಳ ಮೂಲಕ ಭರ್ಜರಿ ವೀಕ್ಷಕರನ್ನು ಪಡೆದುಕೊಂಡಿದೆ.
ಎರಡನೇ ಸ್ಥಾನದಲ್ಲಿ ಈ ವಾರ ಜೀ ಕನ್ನಡ ವಾಹಿನಿಯ ಲಕ್ಷ್ಮೀ ನಿವಾಸ ಧಾರವಾಹಿಯಿದೆ. ಮೂರನೇ ಸ್ಥಾನದಲ್ಲಿ ಪುಟ್ಟಕ್ಕನ ಮಕ್ಕಳು ಜೊತೆ ಭಾಗ್ಯಲಕ್ಷ್ಮಿ ಧಾರವಾಹಿ ಇದೆ. ಭಾಗ್ಯ ಲಕ್ಷ್ಮಿ ಧಾರವಾಹಿಯೂ ಈ ವಾರ ರೋಚಕತೆಯಿಂದ ಕೂಡಿತ್ತು. ನಾಯಕಿ ಭಾಗ್ಯಗೆ ಪತಿ ತಾಂಡವ್ ವಂಚನೆ ಗೊತ್ತಾಗಿದ್ದು, ಮನೆ ಬಿಟ್ಟು ಹೊರಬಂದಿದ್ದಾಳೆ. ಅಣ್ಣಯ್ಯ ಧಾರವಾಹಿ ನಾಲ್ಕನೇ ಸ್ಥಾನದಲ್ಲಿದೆ. ಆದರೆ ಸೀತಾರಾಮ ಧಾರವಾಹಿಯಲ್ಲಿ ಸಿಹಿ ಸತ್ತಿದ್ದು ವೀಕ್ಷಕರಿಗೆ ಬೇಸರ ತಂದಿದ್ದು ಈ ವಾರವೂ ಉತ್ತಮ ಟಿಆರ್ ಪಿ ಬಂದಿಲ್ಲ.