Select Your Language

Notifications

webdunia
webdunia
webdunia
webdunia

BBK 11: ಶೋಭಾ ಶೆಟ್ಟಿ ಅನಾರೋಗ್ಯದ ಬಗ್ಗೆ ತಲೆಗೊಂದು ಮಾತು

Shobha Shetty

Krishnaveni K

ಬೆಂಗಳೂರು , ಮಂಗಳವಾರ, 3 ಡಿಸೆಂಬರ್ 2024 (11:44 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಪ್ರವೇಶ ಮಾಡಿದ್ದ ಶೋಭಾ ಶೆಟ್ಟಿ ಎರಡೇ ವಾರಕ್ಕೆ ಮನೆಯಿಂದ ತಾವಾಗಿಯೇ ಹೊರಬಂದಿದ್ದಾರೆ. ಈಗ ಶೋಭಾ ಅನಾರೋಗ್ಯದ ಬಗ್ಗೆ ನೆಟ್ಟಿಗರು ತಲೆಗೊಂದು ಮಾತನಾಡುತ್ತಿದ್ದಾರೆ.

ಎರಡು ವಾರಗಳ ಹಿಂದೆ ಶೋಭಾ ಶೆಟ್ಟಿ ಮತ್ತು ರಜತ್ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದರು. ಶೋಭಾ ಬಂದ ದಿನದಿಂದಲೇ ಕೂಗಾಡಿ, ಕಿರುಚಾಡಿ ಮನೆಯಲ್ಲಿ ಹೈಲೈಟ್ ಆಗಿದ್ದರು. ಕೆಲವರಿಗೆ ಅವರ ವರ್ತನೆ ಅತಿರೇಕ ಎನಿಸಿದ್ದೂ ಇದೆ. ಆದರೆ ಈಗಾಗಲೇ ತೆಲುಗು ಬಿಗ್ ಬಾಸ್ ನಲ್ಲಿ ಆಡಿದ್ದ ಶೋಭಾಗೆ ಕನ್ನಡ ಬಿಗ್ ಬಾಸ್ ನಲ್ಲಿ ಅನುಭವವಿರುವ ಕಾರಣ ಸುಲಭವಾಗಬಹುದು ಎಂದೇ ಎಲ್ಲರೂ ಅಂದುಕೊಂಡಿದ್ದರು.

ಮೊದಲ ವಾರ ಅವರು ಅಷ್ಟೇ ಉತ್ಸಾಹದಿಂದ ಟಾಸ್ಕ್ ನಲ್ಲಿ ಭಾಗಿಯಾಗಿದ್ದರು ಕೂಡಾ. ಆದರೆ ಈ ವಾರಂತ್ಯದಲ್ಲಿ ಕಿಚ್ಚ ಸುದೀಪ್ ಮುಂದೆ ನಾನು ಮನೆಯಿಂದ ಹೊರಹೋಗುತ್ತೇನೆ. ನನಗೆ ಆಗುತ್ತಿಲ್ಲ, ಆರೋಗ್ಯ ಸರಿಯಿಲ್ಲ ಕಳುಹಿಸಿಕೊಡಿ ಎಂದು ಅತ್ತು ಕರೆದು ಬೇಡಿಕೊಂಡಿದ್ದರು. ಕೊನೆಗೆ ತಾಳ್ಮೆ ಕಳೆದುಕೊಂಡ ಬಿಗ್ ಬಾಸ್, ಕಿಚ್ಚ ಸುದೀಪ್ ಮನೆಯಿಂದ ಹೊರ ಕಳುಹಿಸಿದ್ದರು.

ಇದೀಗ ಶೋಭಾ ಬಗ್ಗೆ ನೆಟ್ಟಿಗರು ಒಂದೊಂದು ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಶೋಭಾ ಕೆಲವು ದಿನಗಳ ಹಿಂದಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಹೀಗಾಗಿ ಅವರು ಗರ್ಭಿಣಿಯಾಗಿರಬಹುದು ಎಂದು ಹೇಳಿದವರೂ ಇದ್ದಾರೆ. ಮತ್ತೆ ಕೆಲವರು ಪಾಪ ಏನೋ ಬಹಿರಂಗವಾಗಿ ಹೇಳಲಾಗದ ಸಮಸ್ಯೆ ಇರಬೇಕು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಅದೇನೇ ಇರಲಿ, ಶೋಭಾ ಮನೆಯಿಂದ ಹೋಗಿರುವುದರಿಂದ ಲಾಭವಾಗಿರುವುದು ಐಶ್ವರ್ಯಾಗೆ.

Share this Story:

Follow Webdunia kannada

ಮುಂದಿನ ಸುದ್ದಿ

Rishab Shetty: ಛತ್ರಪತಿ ಶಿವಾಜಿ ಮಹಾರಾಜನಾಗಿ ರಿಷಬ್ ಶೆಟ್ಟಿ: ಬಾಲಿವುಡ್ ನ್ನೂ ಆಳಲು ಹೊರಟ ಡಿವೈನ್ ಸ್ಟಾರ್