Select Your Language

Notifications

webdunia
webdunia
webdunia
webdunia

Rishab Shetty: ಛತ್ರಪತಿ ಶಿವಾಜಿ ಮಹಾರಾಜನಾಗಿ ರಿಷಬ್ ಶೆಟ್ಟಿ: ಬಾಲಿವುಡ್ ನ್ನೂ ಆಳಲು ಹೊರಟ ಡಿವೈನ್ ಸ್ಟಾರ್

Rishab Shetty Chhatrapati Shivaji Maharaj

Krishnaveni K

ಮುಂಬೈ , ಮಂಗಳವಾರ, 3 ಡಿಸೆಂಬರ್ 2024 (11:33 IST)
ಮುಂಬೈ: ಕಾಂತಾರ ಮೂಲಕ ದೇಶದಾದ್ಯಂತ ಸುದ್ದಿ ಮಾಡಿದ ರಿಷಬ್ ಶೆಟ್ಟಿ ಈಗ ಬಾಲಿವುಡ್ ನ್ನು ಆಳಲು ಹೊರಟಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜ ಎನ್ನುವ ಅವರ ಹೊಸ ಸಿನಿಮಾವೊಂದು ಘೋಷಣೆಯಾಗಿದೆ.

ಇದು ಬಾಲಿವುಡ್ ನಿರ್ಮಾಪಕ ಕಮ್ ನಿರ್ದೇಶಕ ಸಂದೀಪ್ ಸಿಂಗ್ ಅವರ ಸಿನಿಮಾವಾಗಿದೆ. ಇದೀಗ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದ್ದು, ಛತ್ರಪತಿ ಶಿವಾಜಿಯ ಅವತಾರದಲ್ಲಿ ರಿಷಬ್ ಖಡಕ್ ಲುಕ್ ಬಿಡುಗಡೆಯಾಗಿದೆ. ಈ ಪೋಸ್ಟರ್ ನೋಡುತ್ತಿದ್ದಂತೇ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಷ್ಟೇ ರಿಷಬ್ ತೆಲುಗಿನಲ್ಲಿ ಜೈ ಹನುಮಾನ್ ಸಿನಿಮಾದಲ್ಲಿ ಆಂಜನೇಯನ ಪಾತ್ರ ಮಾಡುವುದಾಗಿ ಘೋಷಿಸಿದ್ದರು. ಇದೀಗ ರಿಷಬ್ ಬಾಲಿವುಡ್ ಸಿನಿಮಾ ಘೋಷಣೆಯಾಗಿದೆ. ಈ ಸಿನಿಮಾವೂ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬಿಡುಗಡೆಯಾಗಲಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

 ಈ ಸಿನಿಮಾ 2027 ರ ಜನವರಿ 21 ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಿದೆ ಚಿತ್ರತಂಡ. ಛತ್ರಪತಿ ಶಿವಾಜಿ ಮಹಾರಾಜರ ಜೀವನಗಾಥೆಯನ್ನೊಳಗೊಂಡ ಸಿನಿಮಾ ಇದಾಗಿರಲಿದೆ. ಕಾಂತಾರ, ಹನುಮಾನ್ ಬಳಿಕ ರಿಷಬ್ ಮತ್ತೊಂದು ಐತಿಹಾಸಿಕ ಶೇಡ್ ಇರುವ ಪಾತ್ರದಲ್ಲಿ ಜನರ ಮುಂದೆ ಕಾಣಿಸಿಕೊಳ್ಳಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಣ್ಣೀರು ಹಾಕುತ್ತಲೇ ಮನೆಯಿಂದ ಹೊರ ನಡೆದ ಶೋಭಾ ಶೆಟ್ಟಿ: ಶಿಶಿರ್‌, ಐಶ್ವರ್ಯಾಗೆ ಅದೃಷ್ಟ ಎಂದ ಫ್ಯಾನ್ಸ್‌