Publish Date: Wed, 27 Nov 2024 (15:51 IST)
Updated Date: Wed, 27 Nov 2024 (15:56 IST)
ಬೆಂಗಳೂರು: ಕಾಂತಾರ ಸಿನಿಮಾ ಸಕ್ಸಸ್ ಆದ ಬಳಿಕ ಬೇರೆ ಭಾಷೆಗಳಲ್ಲಿ ಸಾಕಷ್ಟ ಆಫರ್ ಬಂದರೂ ಕನ್ನಡವೇ ನನ್ನ ಮೊದಲ ಆದ್ಯತೆ ಎಂದಿದ್ದ ರಿಷಬ್ ಶೆಟ್ಟಿ ಈಗ ತೆಲುಗಿನಲ್ಲಿ ಎರಡನೇ ಸಿನಿಮಾ ಒಪ್ಪಿಕೊಂಡಿದ್ದಾರೆ.
ಕಾಂತಾರ ಚಾಪ್ಟರ್ 1 ಸಿನಿಮಾ ಚಿತ್ರೀಕರಣದ ನಡುವೆಯೇ ರಿಷಬ್ ತೆಲುಗಿನಲ್ಲಿ ಜೈ ಹನುಮಾನ್ ಸಿನಿಮಾದಲ್ಲಿ ನಟಿಸುತ್ತಿರುವ ಸುದ್ದಿ ಕೊಟ್ಟಿದ್ದರು. ಆಂಜನೇಯನ ಪಾತ್ರದಲ್ಲಿ ರಿಷಬ್ ಫಸ್ಟ್ ಲುಕ್ ಕೂಡಾ ಬಿಡುಗಡೆಯಾಗಿತ್ತು. ಇದರ ಬೆನ್ನಲ್ಲೇ ರಿಷಬ್ ಮತ್ತೊಂದು ಸಿನಿಮಾವನ್ನು ಒಪ್ಪಿಕೊಂಡ ಸುದ್ದಿ ಬಂದಿದೆ.
ಈ ಬಾರಿ ತೆಲುಗು ಸಿನಿಮಾಗೆ ನಾಯಕನಾಗುತ್ತಿರುವ ಸುದ್ದಿ ಬಂದಿದೆ. ರಾಜಮೌಳಿ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಅಶ್ವಿನ್ ಗಂಗರಾಜು ನಿರ್ದೇಶನ ಮಾಡಲಿರುವ ಹೊಸ ಸಿನಿಮಾಗೆ ರಿಷಬ್ ನಾಯಕರಾಗುತ್ತಿದ್ದಾರೆ. ಇದು ತೆಲುಗಿನಲ್ಲಿ ರಿಷಬ್ ಗೆ ಎರಡನೇ ಸಿನಿಮಾ.
ಇದರ ಜೊತೆಗೆ ಬಾಲಿವುಡ್ ನಲ್ಲಿ ಆಶುತೋಶ್ ಗೋವರಿಕರ್ ನಿರ್ದೇಶನದ ಸಿನಿಮಾದಲ್ಲೂ ರಿಷಬ್ ನಟಿಸಲಿದ್ದಾರೆ. ಈ ಮೂಲಕ ಕನ್ನಡದಲ್ಲಿ ಏಕೈಕ ಸಿನಿಮಾ ಮಾಡುತ್ತಿರುವ ರಿಷಬ್ ಈಗಾಗಲೇ ಪರಭಾಷೆಗಳಲ್ಲಿ ಮೂರು ಸಿನಿಮಾಗಳನ್ನು ಒಪ್ಪಿಕೊಂಡಿರುವುದು ಕನ್ ಫರ್ಮ್ ಆಗಿದ್ದಾರೆ.