Publish Date: Tue, 11 Aug 2020 (09:37 IST)
Updated Date: Tue, 11 Aug 2020 (09:39 IST)
ಬೆಂಗಳೂರು: ಬಿಗ್ ಬಾಸ್ ನಲ್ಲಿ ಮೋಡಿ ಮಾಡಿದ್ದ ಶೈನ್ ಶೆಟ್ಟಿ ಹಾಗೂ ದೀಪಿಕಾ ದಾಸ್ ನಿಜ ಜೀವನದಲ್ಲೂ ಉತ್ತಮ ಸ್ನೇಹಿತರಾಗಿಯೇ ಮುಂದುವರಿದಿದ್ದಾರೆ. ಆದರೆ ಇವರ ಜೋಡಿ ನೋಡಿ ಹಲವರು ಇವರ ನಡುವೆ ಸ್ನೇಹಕ್ಕೂ ಮೀರಿದ ಸಂಬಂಧವಿದೆ ಎಂದು ಕಾಲೆಳೆದಿದ್ದರು.
ದೀಪಿಕಾ, ಶೈನ್ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಲಂಚ್ ಡೇಟ್ ಮಾಡಿದ ಫೋಟೋ ಪ್ರಕಟಿಸಿದ ಮೇಲಂತೂ ಅಭಿಮಾನಿಗಳು ನೀವು ಇಬ್ಬರೂ ಒಳ್ಳೆ ಜೋಡಿ, ಮದುವೆಯಾಗಿ ಎನ್ನುವ ಒತ್ತಾಯ ಮಾಡುತ್ತಿದ್ದಾರೆ. ಅಭಿಮಾನಿಯೊಬ್ಬರಂತೂ ಇದು ನಮ್ಮ ಹಂಬಲ್ ರಿಕ್ವೆಸ್ಟ್, ದಯವಿಟ್ಟು ನೀವು ಮದುವೆಯಾಗಿ ಎಂದಿದ್ದಾರೆ.
ಶೈನ್, ದೀಪಿಕಾ ಜತೆಗೆ ಬಿಗ್ ಬಾಸ್ ಸ್ಪರ್ಧಿಗಳಾಗಿದ್ದ ವಾಸುಕಿ ವೈಭವ್, ಆರ್ ಜೆ ಪೃಥ್ವಿ ಕೂಡಾ ಲಂಚ್ ಡೇಟ್ ಗೆ ಜತೆಯಾಗಿದ್ದರು. ಆದರೆ ಶೈನ್ ಜತೆಗೆ ದೀಪಿಕಾ ಫನ್ನಿ ಕ್ಷಣಗಳ ಫೋಟೋ ನೋಡಿದ ಮೇಲಂತೂ ಅಭಿಮಾನಿಗಳು ಮದುವೆಯಾಗಿ ಎಂದು ಒತ್ತಾಯ ಶುರು ಮಾಡಿದ್ದಾರೆ.