ಹೊಸ ಕೆಲಸ ಶುರು ಮಾಡಿಕೊಂಡ ಬಿಗ್ ಬಾಸ್ ಶೈನ್ ಶೆಟ್ಟಿ

ಶನಿವಾರ, 1 ಆಗಸ್ಟ್ 2020 (10:19 IST)
ಬೆಂಗಳೂರು: ಬಿಗ್ ಬಾಸ್ ಶೋ ವಿನ್ನರ್ ಆದ ಮೇಲೆ ನಟ ಶೈನ್ ಶೆಟ್ಟಿ ಏನ್ಮಾಡ್ತಿದ್ದಾರೆ ಎನ್ನುವುದಕ್ಕೆ ಉತ್ತರ ಸಿಕ್ಕಿದೆ. ಬಿಗ್ ಬಾಸ್ ಆದ ಮೇಲೆ ಶೈನ್ ಕೆಲವೊಂದು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ, ಗಲ್ಲಿ ಕಿಚನ್ ಶುರು ಮಾಡ್ತಾರೆ ಎಂದೆಲ್ಲಾ ಸುದ್ದಿಯಾಗಿತ್ತು.ಆದರೆ ಇದೀಗ ಶೈನ್ ಇದೆಲ್ಲವನ್ನೂ ಮೀರಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ತಮ್ಮದೇ ಯೂ ಟ್ಯೂಬ್ ಚಾನೆಲ್ ಶುರು ಮಾಡಿಕೊಂಡಿದ್ದು, ಇದರಲ್ಲಿ ಹೊಸ ಪ್ರತಿಭೆಗಳಿಗೆ, ತಮ್ಮ ಪ್ರತಿಭೆಯನ್ನು ಹೊರ ಜಗತ್ತಿಗೆ ತೋರಿಸಬೇಕೆಂದು ಬಯಸುವವರಿಗೆ ಒಂದು ವೇದಿಕೆ ಒದಗಿಸಿಕೊಡಲಿದ್ದಾರೆ.

‘ರಂಗಸ್ಥಳ’ ಎಂಬ ಹೆಸರಿನ ಹೊಸ ಯೂ ಟ್ಯೂಬ್ ಚಾನೆಲ್ ನ್ನು ವರಮಹಾಲಕ್ಷ್ಮಿ ಹಬ್ಬದ ದಿನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಲಾಂಚ್ ಮಾಡಿದ್ದಾರೆ. ಈ ಚಾನೆಲ್ ನ್ನು ನೀವೂ ನಿಮ್ಮ ಪ್ರತಿಭೆ ಪ್ರದರ್ಶಿಸಲು ವೇದಿಕೆಯಾಗಿ ಬಳಸಬಹುದು ಎಂದು ಶೈನ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕೊರೋನಾದಿಂದ ಗುಣಮುಖರಾದ ಈ ಸೆಲೆಬ್ರಿಟಿಗಳ ಕತೆ ನಿಮಗೆ ಸ್ಪೂರ್ತಿ ನೀಡಲಿ