Select Your Language

Notifications

webdunia
webdunia
webdunia
Sunday, 13 April 2025
webdunia

ಸೆಟ್ಟೇರಿದ ‘ಹೇ ರಾಮ್’ ಚಿತ್ರ

ಹೇ ರಾಮ್
ಬೆಂಗಳೂರು , ಶನಿವಾರ, 8 ಆಗಸ್ಟ್ 2020 (20:42 IST)
ಕ್ಲ್ಯಾಪ್ ಮಾಡಿ ಸಾಥ್ ನೀಡಿದ ಡಾಲಿ ಧನಂಜಯ್ ಲಾಕ್‌ಡೌನ್‌ನಿಂದ ಸ್ತಬ್ಧವಾಗಿದ್ದ ಕನ್ನಡ ಚಿತ್ರರಂಗ ಅನ್‌ಲಾಕ್‌ನಿಂದ ಮತ್ತೆ ಸಕ್ರಿಯವಾಗುತ್ತಿದೆ.
ಸಿನಿಮಾ ಕೆಲಸಗಳು ಒಂದೊಂದಾಗಿ ಆರಂಭವಾಗುತ್ತಿದೆ. ಇದೇ ಸಂದರ್ಭದಲ್ಲಿ ಹೊಸ ಚಿತ್ರವೊಂದು ಸೆಟ್ಟೇರಿದ್ದು ಡಾಲಿ ಧನಂಜಯ್ ಕ್ಲ್ಯಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
 
ಪ್ರವೀಣ್ ಬೇಲೂರು ನಿರ್ದೇಶನದಲ್ಲಿ ಮೂಡಿ ಬರಲು ಸಜ್ಜಾಗಿರೋ ‘ಹೇ ರಾಮ್’ ಚಿತ್ರದ ಮುಹೂರ್ತ ಕಾರ್ಯ ನೆರವೇರಿದೆ. ಸದ್ಯದಲ್ಲೇ ಚಿತ್ರದ ಶೂಟಿಂಗ್ ಕೂಡ ಆರಂಭವಾಗಲಿದೆ. ನೈಜ ಘಟನೆ ಆಧಾರಿತ ಚಿತ್ರವಾಗಿದ್ದು ಪ್ರವೀಣ್ ಬೇಲೂರು ನಿರ್ದೇಶನದ ಜೊತೆ ಚಿತ್ರದ ನಿರ್ಮಾಣ ಜವಾಬ್ದಾರಿಯನ್ನು ಹೊತ್ತಿದ್ದಾರೆ.
 
ಚಿತ್ರದಲ್ಲಿ ಬಿಗ್ ಬಾಸ್ ಮೂಲಕ ಚಿರಪರಿಚಿತರಾದ ಚೈತ್ರ ಕೋಟೂರ್ ಬಣ್ಣ ಹಚ್ಚುತ್ತಿದ್ದಾರೆ.ಸೂಜಿದಾರ ಚಿತ್ರದಲ್ಲಿ ನಟಿಸಿ ಗಮನ ಸೆಳೆದಿದ್ದ ಚೈತ್ರ ಕೋಟೂರ್ ಬಿಗ್ ಬಾಸ್ ಸೀಸನ್- 7ರ ಮೂಲಕ ಚಿರಪರಿಚಿತರಾಗಿದ್ರು. ಇದೀಗ ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಚೈತ್ರ ಕೋಟೂರ್ ‘ಹೇ ರಾಮ್’ಚಿತ್ರದಲ್ಲಿ ವಿಭಿನ್ನ ಹಾಗೂ ಪ್ರಮುಖ ಪಾತ್ರದಲ್ಲಿ ಮಿಂಚಲಿದ್ದಾರೆ.
webdunia
ನಾಯಕನಿಗಾಗಿ ಹುಡುಕಾಟ ನಡೆಸುತ್ತಿರೋ ‘ಹೇ ರಾಮ್’ ತಾರಾಬಳಗದಲ್ಲಿ ಧರ್ಮ, ಸಪ್ತಮಿ ಗೌಡ,ಸಚ್ಚಿನ್ ಪುರೋಹಿತ್, ನವೀನ್ ರಾಜ್, ಮಂಜುನಾಥ್, ಪೂರ್ಣ ಸೇರಿದಂತೆ ಹಲವು ಕಲಾವಿದರು ಬಣ್ಣಹಚ್ಚಿದ್ದಾರೆ. ಚಿತ್ರಕ್ಕೆ ಸಾಹಿತ್ಯ ಮತ್ತು ಸಂಗೀತ ನೀಡುವ ಸಾರಥ್ಯವನ್ನು ಡಾ. ವಿ ನಾಗೇಂದ್ರ ಪ್ರಸಾದ್ ಹೊತ್ತುಕೊಂಡಿದ್ದು, ಪ್ರದೀಪ್ ವಿ ಬಂಗಾರ ಪೇಟೆ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬ್ಯೂಟಿ ಸಿಕ್ರೆಟ್ ನ್ನು ರಿವೀಲ್ ಮಾಡಿದ ನಟಿ ರಶ್ಮಿಕಾ ಮಂದಣ್ಣ