Publish Date: Wed, 27 Nov 2019 (09:07 IST)
Updated Date: Wed, 27 Nov 2019 (09:10 IST)
ಬೆಂಗಳೂರು: ಈ ವಾರ ಬಿಗ್ ಬಾಸ್ ಮನೆಗೆ ಇಬ್ಬರ ವೈಲ್ಡ್ ಕಾರ್ಡ್ ಎಂಟ್ರಿಯಾಗಿದೆ. ಸೋಮವಾರ ರಕ್ಷಾ ಸೋಮಶೇಖರ್ ಹೊಸದಾಗಿ ಮನೆಗೆ ಪ್ರವೇಶಿಸಿದ್ದರೆ, ನಿನ್ನೆ ದಿನ ಚೈತ್ರಾ ಕೋಟೂರು ರಿ ಎಂಟ್ರಿ ಪಡೆದಿದ್ದಾರೆ.
ಆದರೆ ಚೈತ್ರಾ ರಿ ಎಂಟ್ರಿಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರು ನಾನಾ ಬಗೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಯ್ಯೋ.. ಇವಳು ತಲೆ ತಿನ್ನುವ ರೇಂಜ್ ಗೆ ಕಿಚ್ಚ ಸುದೀಪ್ ಗೂ ಉರಿಯುತ್ತೆ. ಇವಳನ್ನು ಯಾಕಪ್ಪಾ ಮತ್ತೆ ಕರೆಸಿದ್ರಿ? ಒಂದು ವೇಳೆ ಕರೆಸುವುದಿದ್ದರೆ ಮತ್ತೆ ಯಾಕೆ ಎಲಿಮಿನೇಷನ್ ಮಾಡ್ತೀರಿ ಎಂದು ಕೆಲವರು ಕಿಡಿ ಕಾರಿದ್ದಾರೆ.
ಮತ್ತೆ ಕೆಲವರು ಚೈತ್ರಾ ಬಂದರೆ ಮಜವಾಗಿರುತ್ತೆ. ಇನ್ನು ಮೇಲೆ ಶೈನ್ ಶೆಟ್ಟಿ ಕತೆ ಮುಗೀತು ಎಂದಿದ್ದಾರೆ. ಯಾಕೆಂದರೆ ಚೈತ್ರಾ ಮನೆಯಲ್ಲಿದ್ದಷ್ಟು ದಿನ ಶೈನ್ ಹಿಂದೆ ಬಿದ್ದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಈಗ ಚೈತ್ರಾ ಮನೆಗೆ ಬಂದಿರುವುದರಿಂದ ಮತ್ತೆ ಶೈನ್ ಉರಿ ಹತ್ತಿಸೋದು ಗ್ಯಾರಂಟಿ ಎನ್ನುವುದು ಪ್ರೇಕ್ಷಕರ ಅಭಿಪ್ರಾಯ.