Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಕನ್ನಡ: ದೊಡ್ಮನೆಗೆ ಎಂಟ್ರಿ ಕೊಟ್ಟ ಹೊಸ ಚೆಲುವೆ ಯಾರು ಗೊತ್ತಾ?

ಬಿಗ್ ಬಾಸ್ ಕನ್ನಡ
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಈ ವಾರ ಸುಜಾತ ಎಲಿಮಿನೇಟ್ ಆದ ಬೆನ್ನಲ್ಲೇ ಮತ್ತೊಬ್ಬರ ವೈಲ್ಡ್ ಕಾರ್ಡ್ ಎಂಟ್ರಿಯಾಗಿದೆ. ಅವರೇ ರಕ್ಷಾ ಸೋಮಶೇಖರ್. ಅಷ್ಟಕ್ಕೂ ಯಾರೀಕೆ ಅಂತೀರಾ?


ಈಕೆ ನಟ ಜೆಕೆ ಜತೆಗೆ ‘ಮೇ 1’ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ರಕ್ಷಾ. ಬೆಂಗಳೂರು ಹುಡುಗಿ ರಕ್ಷಾ ಮೂಲತಃ ಮಾಡೆಲ್. ಜತೆಗೆ ನೃತ್ಯವೂ ಗೊತ್ತು. ಈ ನಡುವೆ ಸಿನಿಮಾ ರಂಗದಲ್ಲಿ ಬ್ರೇಕ್ ಗಾಗಿ ಕಾಯುತ್ತಿರುವ ರಕ್ಷಾ ಎಂಟ್ರಿ ಬಿಗ್ ಬಾಸ್ ಸ್ಪರ್ಧಿಗಳಿಗೆ ಸರ್ಪ್ರೈಸ್ ಆಗಿತ್ತು.

ಮನೆಯಲ್ಲಿ ರಕ್ಷಾ ಆಗಮನದಿಂದ ಇತರ ಹೆಣ್ಣು ಮಕ್ಕಳಲ್ಲಿ ಹೊಟ್ಟೆ ಕಿಚ್ಚು ಏನಾದ್ರೂ ಆಗಿ ಉರಿ ಏಳುತ್ತಾ ಅಥವಾ ಪೃಥ್ವಿಯಂತೆ ಅವರೂ ಮನೆಯವರೊಂದಿಗೆ ಹೊಂದಿಕೊಂಡು ಮಜಾ ಮಾಡ್ತಾರಾ ಕಾದು ನೋಡಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಧ್ರುವ ಸರ್ಜಾ ಮದುವೆ ರಿಸೆಪ್ಷನ್ ಸುಂದರ ಚಿತ್ರಗಳು