Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಕನ್ನಡ: ವಾಸುಕಿ ಚಂದನಾ ಜತೆ ಇದ್ದರೆ ಭೂಮಿಗೆ ಹೊಟ್ಟೆ ಉರಿಯಾಗುತ್ತಾ?

ಬಿಗ್ ಬಾಸ್ ಕನ್ನಡ: ವಾಸುಕಿ ಚಂದನಾ ಜತೆ ಇದ್ದರೆ ಭೂಮಿಗೆ ಹೊಟ್ಟೆ ಉರಿಯಾಗುತ್ತಾ?
ಬೆಂಗಳೂರು , ಗುರುವಾರ, 21 ನವೆಂಬರ್ 2019 (11:47 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಕಳ್ಳ ಪೊಲೀಸ್ ಟಾಸ್ಕ್ ನಿನ್ನೆಯ ದಿನವೂ ಮುಂದುವರಿದಿದೆ. ಈ ನಡುವೆ ವಾಸುಕಿ ವೈಭವ್ ಮತ್ತು ಭೂಮಿ ಶೆಟ್ಟಿ ನಡುವೆ ನಡೆದ ಮಾತುಕತೆಯೊಂದು ಕೌತುಕವಾಗಿದೆ.


ಸಪ್ಪೆ ಮುಖ ಹಾಕಿಕೊಂಡು ಕೂತಿದ್ದ ಭೂಮಿ ಶೆಟ್ಟಿ ಬಳಿ ಬಂದ ವಾಸುಕಿ ಯಾಕೆ ಬೇಸರದಲ್ಲಿದ್ದೀರಿ ಎಂದು ಕೇಳಿದಾಗ ಭೂಮಿ ವಾಸುಕಿ ಮೇಲೆ ಆರೋಪಗಳ ಸುರಿಮಳೆಯೇ ಹಾಕಿದರು. ಅವರ ಅಸಮಾಧಾನಕ್ಕೆ ಕಾರಣವೇನೆಂದರೆ, ಚಂದನಾ ಜತೆ ವಾಸುಕಿ ಆಡುತ್ತಿದ್ದಾರೆ ಎನ್ನುವುದಾಗಿತ್ತು.

ಆಭರಣದ ಪ್ರದರ್ಶನದ ವೇಳೆ ವಾಸುಕಿ ತಮ್ಮ ಜತೆ ಪರ್ಫಾಮ್ ಮಾಡದೇ ನೆಗ್ಲೆಕ್ಟ್ ಮಾಡ್ತಿದ್ದಾರೆ ತಪ್ಪು ತಿಳಿದುಕೊಂಡು ವಾಸುಕಿ ಮೇಲೆ ಭೂಮಿ ಬೇಸರಗೊಂಡಿದ್ದರು. ಹೀಗಾಗಿ ವಾಸುಕಿ ಬಳಿ ಬಂದು ಸಪ್ಪೆ ಮುಖ ಹಾಕಿಕೊಂಡು ಕೂತಿದ್ದ ಭೂಮಿಯನ್ನು ಮಾತನಾಡಿಸಿದರು. ಆಗ ಸಿಡಿದ ಭೂಮಿ ನೆಗ್ಲೆಕ್ಟ್ ಮಾಡಿದ್ದು ನೀನು. ಚಂದನಾ ಜತೆ ಪರ್ಫಾರ್ಮ್ ಮಾಡ್ತಿದ್ದೀನಿ ಎಂದು ಹೇಳುವ ಸೌಜನ್ಯವೂ ನಿನಗಿರಲಿಲ್ಲ. ನೆಗ್ಲೆಕ್ಟ್ ಮಾಡಿದ್ದು ನೀನು ಎಂದು ಆರೋಪಿಸಿದರು.

ಇದಕ್ಕೆ ವಾಸುಕಿ, ‘ಹೀಗೆ ನನ್ನ ನೆಗ್ಲೆಕ್ಟ್ ಮಾಡಬೇಡ. ನಾನು ಪರ್ಫಾರ್ಮ್ ಮಾಡ್ತಿಲ್ಲ. ಇಷ್ಟೇನಾ ನೀನು ನನ್ನ ಅರ್ಥ ಮಾಡಿಕೊಂಡಿದ್ದು’ ಎಂದು ಭೂಮಿ ಶೆಟ್ಟಿಯನ್ನು ಸಾಂತ್ವನಿಸಿ ಹೋದರು. ಇದನ್ನೆಲ್ಲಾ ನೋಡಿದ ವೀಕ್ಷಕರು ಮುಂದೆ ಇವರಿಬ್ಬರೂ ಜೋಡಿಯಾಗೋದು ಗ್ಯಾರಂಟಿ ಎಂದು ಟ್ರೋಲ್ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಮದಕರಿನಾಯಕನಿಗೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಾಯಕಿ?