Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಕನ್ನಡ: ಈ ವಾರ ಮತ್ತೆ ಟಾರ್ಗೆಟ್ ಆದರಾ ಚಂದನ್ ಆಚಾರ್?

ಬಿಗ್ ಬಾಸ್ ಕನ್ನಡ: ಈ ವಾರ ಮತ್ತೆ ಟಾರ್ಗೆಟ್ ಆದರಾ ಚಂದನ್ ಆಚಾರ್?
ಬೆಂಗಳೂರು , ಮಂಗಳವಾರ, 19 ನವೆಂಬರ್ 2019 (09:41 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಈ ವಾರ ಐವರು ಸದಸ್ಯರು ಎಲಿಮಿನೇಟ್ ಆಗಲು ನಾಮಿನೇಟ್ ಆಗಿದ್ದಾರೆ. ಮತ್ತೆ ಚಂದನ್ ಆಚಾರ್ ನಾಮಿನೇಟ್ ಆಗಿದ್ದಾರೆ ಎನ್ನುವುದು ವಿಶೇಷ.


ಈ ವಾರ ಮನೆಯಿಂದ ಹೊರಹೋಗಲು ಸುಜಾತ, ಕುರಿ ಪ್ರತಾಪ್, ದೀಪಿಕಾ ದಾಸ್, ಕಿಶನ್ ಹಾಗೂ ಚಂದನ್ ಆಚಾರ್ ನಾಮಿನೇಟ್ ಆಗಿದ್ದಾರೆ. ವಿಶೇಷವೆಂದರೆ ಚಂದನ್ ಆಚಾರ್ ಸತತವಾಗಿ ನಾಮಿನೇಟ್ ಆಗುತ್ತಲೇ ಇದ್ದಾರೆ.

ಈ ಬಗ್ಗೆ ವೀಕ್ಷಕರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಬೇಕೆಂದೇ ಚಂದನ್ ಆಚಾರ್ ರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಈ ವಾರ ಸುಜಾತ ಮನೆಯಿಂದ ಹೊರಹೋಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಯಾರು ಉಳಿಯುತ್ತಾರೆ, ಯಾರು ಹೊರ ಹೋಗುತ್ತಾರೆ ಎನ್ನುವುದನ್ನು ನೋಡಲು ವಾರಂತ್ಯದವರೆಗೆ ಕಾಯಲೇಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಉಪೇಂದ್ರ ಕಬ್ಜ ಸಿನಿಮಾಗೆ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಸಿನಿಮಾವೇ ಸ್ಪೂರ್ತಿಯಂತೆ!