Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಕನ್ನಡ: ಈ ವಾರ ಮನೆಯಿಂದ ಹೊರಹೋಗುವ ಆ ಸ್ಪರ್ಧಿ ಯಾರು ಗೊತ್ತಾ?

ಬಿಗ್ ಬಾಸ್ ಕನ್ನಡ: ಈ ವಾರ ಮನೆಯಿಂದ ಹೊರಹೋಗುವ ಆ ಸ್ಪರ್ಧಿ ಯಾರು ಗೊತ್ತಾ?
ಬೆಂಗಳೂರು , ಶನಿವಾರ, 16 ನವೆಂಬರ್ 2019 (08:34 IST)
ಬೆಂಗಳೂರು: ಈ ವಾರ ಬಿಗ್ ಬಾಸ್‍ ಮನೆಯಿಂದ ಹೊರ ಹೋಗಲು ಬರೋಬ್ಬರಿ 11 ಜನ ನಾಮಿನೇಟ್ ಆಗಿದ್ದಾರೆ. ಅವರಲ್ಲಿ ಹೋಗುವವರು ಯಾರು? ಉಳಿಯುವವರು ಯಾರು?


ಇಂದಿನಿಂದ ಎಲಿಮಿನೇಷನ್ ಪ್ರಕ್ರಿಯೆ ಆರಂಭವಾಗಲಿದ್ದು, ನಾಳೆಯ ಸಂಚಿಕೆಯಲ್ಲಿ ಹೊರಹೋಗುವ ಸ್ಪರ್ಧಿ ಯಾರು ಎಂದು ಗೊತ್ತಾಗಲಿದೆ. ವಾರದ ಕತೆ ಕಿಚ್ಚನ ಜತೆ ಕಾರ್ಯಕ್ರಮದಲ್ಲಿ ಈ ವಾರ ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುವುದಂತೂ ಗ್ಯಾರಂಟಿ.

ಈ ನಡುವೆ ವೀಕ್ಷಕರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಕಾಲಿಗೆ ಏಟು ಮಾಡಿಕೊಂಡು ವೀಕ್ ಆಗಿರುವ ಸುಜಾತ, ಚಂದನ್ ಆಚಾರ್, ಜೈ ಜಗದೀಶ್ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ. ಇದುವರೆಗೆ ಪುರುಷ ಸ್ಪರ್ಧಿಗಳ ಪೈಕಿ ಗುರಲಿಂಗ ಸ್ವಾಮೀಜಿ ಬಿಟ್ಟರೆ ಬೇರೆ ಯಾರೂ ಎಲಿಮಿನೇಟ್ ಆಗಿಲ್ಲ. ಈ ವಾರ ಪುರುಷ ಸ್ಪರ್ಧಿಗಳಲ್ಲಿ ಒಬ್ಬರು ಹೊರ ಹೋದರೂ ಅಚ್ಚರಿಯಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್: ಪ್ರಿಯಾಂಕರನ್ನು ಬೇಕೆಂದೇ ಟಾರ್ಗೆಟ್ ಮಾಡಿದರಾ ಶೈನ್ ಶೆಟ್ಟಿ?