Publish Date: Fri, 15 Nov 2019 (10:21 IST)
Updated Date: Fri, 15 Nov 2019 (10:30 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಮುಗಿದ ಮೇಲೆ ಯಾರು ಉತ್ತಮ ಪರ್ಫಾರ್ಮರ್ ಯಾರು ಅಲ್ಲ ಎಂಬ ಬ್ಯಾಡ್ಜ್ ಕೊಡುವ ವಿಚಾರದಲ್ಲಿ ಪ್ರಿಯಾಂಕ ಬೇಸರಗೊಂಡಿದ್ದಾರೆ.
ಶೈನ್ ಶೆಟ್ಟಿ ಪ್ರಿಯಾಂಕರನ್ನು ಮನೆಯಲ್ಲಿ ಜಾಸ್ತಿ ಮನರಂಜನೆ ಕೊಡಲ್ಲ ಎನ್ನುವ ಕಾರಣಕ್ಕೆ ಉತ್ತಮ ಪರ್ಫಾರ್ಮರ್ ಅಲ್ಲ ಎಂದು ಡಿಸ್ ಲೈಕ್ ಬ್ಯಾಡ್ಜ್ ಕೊಟ್ಟರು. ಆದರೆ ಇದು ಪ್ರಿಯಾಂಕಗೆ ಇಷ್ಟವಾಗಿಲ್ಲ.
ಡ್ಯಾನ್ಸ್ ಮಾಡಲ್ಲ, ಹಾಡು ಹಾಡಲ್ಲ ಎಂದ ಮಾತ್ರಕ್ಕೆ ನಾನು ಕೆಟ್ಟ ಪರ್ಫಾರ್ಮರ್ ಎನ್ನುವುದು ಸರಿಯಲ್ಲ ಎಂದು ಪ್ರಿಯಾಂಕ ಮನೆಯಲ್ಲಿ ತಮ್ಮ ಆಪ್ತರಾಗಿರುವ ಭೂಮಿ, ಕುರಿ ಪ್ರತಾಪ್ ಜತೆಗೆ ಹೇಳಿಕೊಂಡು ಬೇಸರಿಸಿದ್ದಾರೆ. ಕೇವಲ ಶೈನ್ ಮಾತ್ರವಲ್ಲ, ಇನ್ನೂ ಕೆಲವು ಸದಸ್ಯರು ಪ್ರಿಯಾಂಕ ಹೆಚ್ಚು ಮನರಂಜನೆ ಮಾಡಲ್ಲ ಎಂದಿದ್ದು ಅವರ ಬೇಸರಕ್ಕೆ ಕಾರಣವಾಗಿದೆ.