Publish Date: Tue, 12 Nov 2019 (10:38 IST)
Updated Date: Tue, 12 Nov 2019 (10:41 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿ ಕಿಶನ್ ಮಹಿಳಾ ಸ್ಪರ್ಧಿಗಳಿಗೆ ಮುತ್ತು ಕೊಡುವ ವಿಚಾರಕ್ಕೆ ಮತ್ತೆ ಸುದ್ದಿಯಾಗಿದ್ದಾರೆ. ಈ ಬಾರಿ ಕಿಶನ್ ರಿಂದ ಸಿಹಿ ಮುತ್ತು ಪಡೆದವರು ದೀಪಿಕಾ ದಾಸ್.
ಲಕ್ಷುರಿ ಬಜೆಟ್ ಟಾಸ್ಕ್ ಗೆ ದೀಪಿಕಾ ದಾಸ್ ಮತ್ತು ಭೂಮಿ ಶೆಟ್ಟಿ ನೇತೃತ್ವದಲ್ಲಿ ಎರಡು ತಂಡಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿತ್ತು. ಈ ವೇಳೆ ಕಿಶನ್ ಭೂಮಿ ತಂಡವನ್ನು ಸೇರಲು ಬಯಸುವುದಾಗಿ ಹೇಳಿದರು. ಆದರೆ ದೀಪಿಕಾ ತಂಡಕ್ಕೆ ಒಬ್ಬರು ಸದಸ್ಯರ ಕೊರತೆ ಇರುವ ಕಾರಣ ಬಿಗ್ ಬಾಸ್ ಸೂಚನೆ ಮೇರೆಗೆ ಕಿಶನ್ ಅನಿವಾರ್ಯವಾಗಿ ದೀಪಿಕಾ ತಂಡ ಸೇರಿಕೊಳ್ಳಬೇಕಾಯಿತು.
ದೀಪಿಕಾ ಕಡೆಗೆ ಬರುತ್ತಿದ್ದಂತೇ ಕಿಶನ್ ಆಕೆಯನ್ನು ತಬ್ಬಿಕೊಂಡು ಕೆನ್ನೆಗೆ ಚುಂಬಿಸಿಯೇ ಬಿಟ್ಟರು. ಇದು ಸ್ವಲ್ಪ ಓವರ್ ಆಗಿಲ್ವಾ ಎಂದು ದೀಪಿಕಾ ನಗುತ್ತಲೇ ಆಕ್ಷೇಪಿಸಿದರು. ಯಥಾವತ್ತು ದೀಪಿಕಾಗೆ ಕಿಶನ್ ಕಿಸ್ ಮಾಡಿದ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೊದಲು ಕಿಶನ್ ನ್ನು ಮನೆಯಿಂದ ಹೊರಗೆ ಹಾಕಿ. ಈ ರೀತಿ ಹುಡುಗಿಯರಿಗೆ ಸಿಕ್ಕ ಸಿಕ್ಕ ಹಾಗೆ ಮುತ್ತಿಕ್ಕುತ್ತಿದ್ದಾನಲ್ಲಾ ಎಂದು ಕೆಲವರು ಆಕ್ಷೇಪವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಹುಡುಗಿಯರಿಗೇ ಪ್ರಾಬ್ಲಂ ಇಲ್ಲ ಅಂದ್ರೆ ನಮಗ್ಯಾಕೆ ಪ್ರಾಬ್ಲಂ ಎಂದು ಕಾಮೆಂಟ್ ಮಾಡುತ್ತಿದ್ದಾರೆ.