Publish Date: Mon, 11 Nov 2019 (08:57 IST)
Updated Date: Mon, 11 Nov 2019 (08:58 IST)
ಬೆಂಗಳೂರು: ನಿನ್ನೆ ಭಾನುವಾರ ಅದೇನು ಶುಭ ಮುಹೂರ್ತವೋ. ಅಂತೂ ಮೂವರು ಸೆಲೆಬ್ರಿಟಿಗಳು ಒಂದೇ ದಿನ ಮದುವೆಯಾಗಿದ್ದಾರೆ.
ಕಲರ್ಸ್ ಕನ್ನಡದ ಜನಪ್ರಿಯ ಧಾರವಾಹಿ ಅಗ್ನಿಸಾಕ್ಷಿಯ ನಟಿ ಇಶಿತಾ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುರುಗಾನಂದ ಎಂಬವರ ಜತೆ ಇಶಿತಾ ವಿವಾಹ ಕಾರ್ಯಕ್ರಮ ನೆರವೇರಿದೆ.
ಇನ್ನು, ಸ್ಯಾಂಡಲ್ ವುಡ್ ನ ಉದಯೋನ್ಮುಖ ನಾಯಕ ರಿಷಿ ಮದುವೆಯೂ ನಿನ್ನೆ ನಡೆದಿದೆ. ಸ್ವಾತಿ ಎಂಬವರ ಜತೆ ರಿಷಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕುಲವಧು ಧಾರವಾಹಿ ಖ್ಯಾತಿಯ ಧನ್ಯಾ ಪಾತ್ರಧಾರಿ ದೀಪಿಕಾ ವಿವಾಹ ನಿನ್ನೆ ಕಿರುತೆರೆ ಕಲಾವಿದ ಆಕರ್ಷ್ ಜತೆಗೆ ನೆರವೇರಿದೆ. ಅಂತೂ ಮೂವರೂ ಸೆಲೆಬ್ರಿಟಿಗಳು ಒಂದೇ ದಿನ ಮದುವೆಯಾಗಿದ್ದು ವಿಶೇಷವಾಗಿದೆ.