ಬೆಂಗಳೂರು: ಬಿಗ್ ಬಾಸ್ ಕನ್ನಡ ಮನೆಯಲ್ಲಿ ಜೋಡಿ ಜೀವಗಳಿಗೆ ಏನೂ ಕಡಿಮೆಯಿಲ್ಲ. ನಿನ್ನೆಯ ದಿನವೂ ಯಾರು ಯಾರಿಗೆ ಕಾಳು ಹಾಕ್ತಿದ್ದಾರೆ ಎನ್ನುವ ವಿಚಾರವೇ ಚರ್ಚೆಯಾಯಿತು.
ನಿನ್ನೆಯ ದಿನ ಮನೆಯಲ್ಲಿ ಡೈನಿಂಗ್ ಟೇಬಲ್ ಮುಂದೆ ಕುಳಿತುಕೊಂಡು ಚಂದನಾಳನ್ನು ಎಲ್ಲರೂ ರೇಗಿಸುತ್ತಿದ್ದರು. ವಾಸುಕಿ ವೈಭವ್ ರನ್ನು ಚಂದನಾ ಜತೆ ಲಿಂಕ್ ಮಾಡಿ ಮನೆಯವರು ತಮಾಷೆ ಮಾಡುತ್ತಿದ್ದರೆ, ಕೊಂಚ ಮುಜುಗರಕ್ಕೀಡಾದ ಚಂದನಾ ನಾನು ಯಾರ ಜತೆ ಮಾತನಾಡಿದರೂ ಲಿಂಕ್ ಮಾಡ್ತೀರಾ? ನಾನೇನು ಸ್ವಯಂವರ ಮಾಡಲು ಬಂದಿದ್ದೀನಾ ಎಂದು ರೇಗಿದರು.
ಆದರೆ ಅಷ್ಟರಲ್ಲಿ ಚಂದನಾಗೆ ವಾಸುಕಿ ಮಾತ್ರ ಅಲ್ಲ, ಶೈನ್ ಕೂಡಾ ಕಾಳು ಹಾಕ್ತಿದ್ದಾರೆ ಎಂದು ಕಿಶನ್, ದೀಪಿಕಾ ಮತ್ತಿತರರು ತಮಾಷೆ ಮಾಡಿದ್ದಾರೆ. ಅಲ್ಲಿಗೆ ಇಬ್ಬರು ಹುಡುಗರ ಮುದ್ದಿನ ಹುಡುಗಿ ಚಂದನಾ ಅನ್ನುವುದು ಕನ್ ಫರ್ಮ್ ಆಯ್ತು!