ಬಿಗ್ ಬಾಸ್ ಮನೆಯಿಂದ ಹೊರಬಂದ ಕೂಡಲೇ ಚಂದನ್ ಬಗ್ಗೆ ದುನಿಯಾ ರಶ್ಮಿ ಹೇಳಿದ್ದು ಏನು ಗೊತ್ತಾ?

ಸೋಮವಾರ, 4 ನವೆಂಬರ್ 2019 (10:17 IST)
ಬೆಂಗಳೂರು: ಈ ವಾರ ಬಿಗ್ ಬಾಸ್ ಮನೆಯಿಂದ ಹೊರಬಂದ ಸ್ಪರ್ಧಿ ದುನಿಯಾ ರಶ್ಮಿ. ಮೂರನೇ ವಾರಕ್ಕೆ ಮನೆಯಿಂದ ಹೊರಬಂದ ರಶ್ಮಿ ಬಿಗ್ ಬಾಸ್ ಮನೆಯ ಬಗ್ಗೆ ಕೆಲವು ವಿಚಾರ ಹೇಳಿದ್ದಾರೆ.


ಅದರಲ್ಲೂ ವಿಶೇಷವಾಗಿ ತನ್ನ ಬದಲು ಈ ವಾರ ಚಂದನ್ ಆಚಾರ್ ಹೊರಬರಬೇಕಿತ್ತು ಎಂದು ಹೇಳಿಕೊಂಡಿದ್ದಾರೆ. ಚಂದನ್ ವಿಚಿತ್ರವಾಗಿ ಆಡ್ತಿದ್ದ. ಬೇಕೆಂದೇ ಜಗಳವಾಡುತ್ತಿದ್ದ. ನನ್ನ ಬದಲು ಅವನೇ ಹೊರಬರಬೇಕಿತ್ತು ಎಂದು ರಶ್ಮಿ ಹೇಳಿದ್ದಾರೆ.

ಇನ್ನು, ಮನೆಗೆ ಹೋದ ತಕ್ಷಣ ನನ್ನ ಮುದ್ದಿನ ನಾಯಿ ಮರಿಗಳನ್ನು ಮುದ್ದು ಮಾಡಬೇಕು ಎಂದು ರಶ್ಮಿ ಹೇಳಿಕೊಂಡಿದ್ದಾರೆ. ಒಂದು ವೇಳೆ ವೈಲ್ಡ್ ಕಾರ್ಡ್ ಮೂಲಕ ಮತ್ತೆ ಬಿಗ್ ಬಾಸ್ ಮನೆಗೆ ಪ್ರವೇಶ ಕೊಟ್ಟರೂ ಹೋಗಲು ರೆಡಿ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪುಟ್ಟಣ್ಣ ಕಣಗಾಲ್ ಅವರಿಗೆ ಈ ರೀತಿ ಗೌರವ ಸಲ್ಲಿಸಲಿದ್ದಾರೆ ರಿಷಬ್ ಶೆಟ್ಟಿ