Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಮನೆಯಿಂದ ಈ ವಾರ ಹೊರಹೋಗುವವರು ಇವರೇ?!

ಬಿಗ್ ಬಾಸ್ ಮನೆಯಿಂದ ಈ ವಾರ ಹೊರಹೋಗುವವರು ಇವರೇ?!
ಬೆಂಗಳೂರು , ಶನಿವಾರ, 9 ನವೆಂಬರ್ 2019 (09:20 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಐದನೇ ವಾರಕ್ಕೆ ಕಾಲಿಡುತ್ತಿದ್ದು, ಇಂದು ಎಲಿಮಿನೇಷನ್ ಪ್ರಕ್ರಿಯೆ ನಡೆಯಲಿದೆ.


ಇಂದು ಮತ್ತು ನಾಳೆ ಕಿಚ್ಚ ಸುದೀಪ್ ಜತೆ ವಾರದ ಕತೆ ಕಿಚ್ಚನ ಜತೆ ಕಾರ್ಯಕ್ರಮ ಪ್ರಸಾರವಾಗಲಿದ್ದು, ಅದರಲ್ಲಿ ಮನೆಯಿಂದ ಹೊರಹೋಗಲಿರುವ ಸ್ಪರ್ಧಿ ಯಾರು ಎಂಬುದು ನಿರ್ಧಾರವಾಗಲಿದೆ.

ಈ ವಾರ ಮನೆಯಿಂದ ಹೊರಹೋಗಲು ಭೂಮಿ ಶೆಟ್ಟಿ, ಪ್ರಿಯಾಂಕ, ರಾಜು ತಾಳಿ ಕೋಟೆ,  ಚಂದನ್ ಆಚಾರ್, ಶೈನ್ ಶೆಟ್ಟಿ, ಚೈತ್ರಾ ಕೋಟೂರು ಮತ್ತು ದೀಪಿಕಾ ದಾಸ್ ನಾಮಿನೇಟ್ ಆಗಿದ್ದಾರೆ. ಈ ಪೈಕಿ ಚಂದನ್ ಆಚಾರ್ ಮತ್ತು ಚೈತ್ರಾ ಕೋಟೂರು ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರು ನೆಗೆಟಿವ್ ಆಗಿ ಕಾಮೆಂಟ್ ಮಾಡುತ್ತಿದ್ದು ಅವರ ಮೇಲೆ ತೂಗುಗತ್ತಿ ಇದೆ. ಉಳಿದಂತೆ ಕೆಲವರು ಪ್ರಿಯಾಂಕ, ದೀಪಿಕಾ ದಾಸ್ ಹಾಗೂ ಶೈನ್ ಶೆಟ್ಟಿ ಬಗ್ಗೆಯೂ ಎಲಿಮಿನೇಟ್ ಆಗಬೇಕೆಂದು ಬಯಸುತ್ತಿದ್ದಾರೆ. ಇವರಲ್ಲಿ ಉಳಿಯುವವರು ಯಾರು, ಹೊರ ಹೋಗುವವರು ಯಾರು ಎಂಬ ಪ್ರಶ್ನೆಗೆ ಇಂದು ಮತ್ತು ನಾಳೆಯ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಕನ್ನಡ ಸ್ಪರ್ಧಿ ಚೈತ್ರಾ ಕೋಟೂರು ವಿವಾದಿತ ಹೇಳಿಕೆ ವಿರುದ್ಧ ಪ್ರತಿಭಟನೆ