ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಸಿಕ್ಸ್ ಪ್ಯಾಕ್ ಹೀರೋ, ಎಲಿಜಿಬಲ್ ಬ್ಯಾಚುಲರ್ ಸ್ಪರ್ಧಿ ಎಂದರೆ ಅದು ಕಿಶನ್. ಆದರೆ ಕಿಶನ್ ಈಗ ಕಿಸ್ ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದಾರೆ.
ಮೊನ್ನೆಯಷ್ಟೇ ದುನಿಯಾ ರಶ್ಮಿ ಮನೆಯಿಂದ ಎಲಿಮಿನೇಟ್ ಆಗಿ ಹೊರಹೋಗುವಾಗ ಕ್ಯಾಮರಾ ಎದುರು ಸೈಕಲ್ ಗ್ಯಾಪ್ ಲ್ಲಿ ಕಿಸ್ ಮಾಡಿದ್ದ ಕಿಶನ್, ನಿನ್ನೆ ಟಾಸ್ಕ್ ಮುಗಿದ ಮೇಲೆ ಚಂದನಾಗೆ ಸಮಾಧಾನ ಮಾಡುವ ನೆಪದಲ್ಲಿ ಕಿಶನ್ ಕಿಸ್ ಮಾಡಿದ್ದು ಕ್ಯಾಮರಾ ಕಣ್ಣಿಗೆ ಬಿದ್ದಿದೆ. ಅಷ್ಟೇ ಅಲ್ಲ, ಈ ಕಿಸ್ ವಿಚಾರಕ್ಕೆ ಸಹ ಸ್ಪರ್ಧಿಗಳೂ ಕಿಶನ್ ಕಾಲೆಳೆದಿದ್ದಾರೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಇದೇ ವಿಚಾರ ಟ್ರೋಲ್ ಆಗಿದೆ. ಕಿಶನ್ ಅವಕಾಶ ಸಿಕ್ಕಾಗಲೆಲ್ಲಾ ಹೀಗೆ ಹುಡುಗಿಯರಿಗೆ ಕಿಸ್ ಮಾಡುವುದು ನೋಡಿ ಏನು ನಡೀತಿದೆ ಬಿಗ್ ಬಾಸ್ ಮನೆಯಲ್ಲಿ ಎಂದು ವೀಕ್ಷಕರು ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.