Publish Date: Mon, 18 Nov 2019 (08:41 IST)
Updated Date: Mon, 18 Nov 2019 (08:43 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ವಾಹಿನಿಯಲ್ಲಿ ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಕ್ತಾಯವಾಗಿದ್ದು ಹಿರಿಯ ನಟ ಜೈ ಜಗದೀಶ್ ಮನೆಯಿಂದ ಹೊರಬಂದಿದ್ದಾರೆ.
ಇದುವರೆಗೆ ಗುರುಲಿಂಗ ಸ್ವಾಮಿ ಬಿಟ್ಟರೆ ಮಹಿಳಾ ಸ್ಪರ್ಧಿಗಳೇ ಹೊರ ಹೋಗುತ್ತಿದ್ದರು. ಇದಾದ ಬಳಿಕ ಜೈ ಜಗದೀಶ್ ಎರಡನೇ ಪುರುಷ ಸ್ಪರ್ಧಿಯಾಗಿ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ.
ಟಾಸ್ಕ್ ಸಂದರ್ಭದಲ್ಲಿ ಜೈ ಜಗದೀಶ್ ಸದಾ ಟೀಕೆಗೊಳಗಾಗುತ್ತಿದ್ದರು ಇಲ್ಲವೇ ಕಳಪೆ ಪ್ರದರ್ಶನ ನೀಡುತ್ತಿದ್ದರು. ಕೆಲವೊಮ್ಮೆ ವಾದ ವಿವಾದಗಳಾದಾಗ ನನ್ನ ಒಮ್ಮೆ ಮನೆಯಿಂದ ಹೊರ ಕಳುಹಿಸಿ. ಸಾಕು, ನಾನು ಹೋಗಿಬಿಡ್ತೇನೆ ಎನ್ನುತ್ತಿದ್ದರು. ಅವರು ಅಂದಿದ್ದಕ್ಕೂ ಈ ವಾರ ಎಲಿಮಿನೇಷನ್ ಆಗಿದ್ದಕ್ಕೂ ಸರಿ ಹೋಗಿದೆ. ಅದರಲ್ಲೂ ಈ ವಾರ ಭೂಮಿ ಶೆಟ್ಟಿ ಟೀ ಶರ್ಟ್ ಎಳೆದ ವಿವಾದದಲ್ಲಿ ಅವರ ಹೆಸರು ಬಂದಿದ್ದು ಅವರಿಗೆ ತೀವ್ರ ಬೇಸರವುಂಟುಮಾಡಿತ್ತು.