Publish Date: Tue, 26 Nov 2019 (10:53 IST)
Updated Date: Tue, 26 Nov 2019 (10:56 IST)
ಬೆಂಗಳೂರು: ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಹೊಡೆದ ನಟಿ ರಕ್ಷಾ ಸೋಮಶೇಖರ್ ನೋಡಿ ಎಲ್ಲರೂ ಅಚ್ಚರಿಗೊಳಗಾದರೆ ಕಿಶನ್ ಗೆ ಮಾತ್ರ ಶಾಕ್ ಆಗಿದೆ.
ಯಾಕೆಂದರೆ ರಕ್ಷಾರನ್ನು ಕಿಶನ್ ಎರಡು ವರ್ಷಗಳ ಹಿಂದೆ ಲವ್ ಮಾಡುತ್ತಿದ್ದರಂತೆ. ಇಬ್ಬರೂ ರಿಲೇಷನ್ ಶಿಪ್ ನಲ್ಲಿ ಇದ್ದು ಬ್ರೇಕಪ್ ಆಗಿದ್ದಾಗ ಸ್ವತಃ ಕಿಶನ್ ಬಾಯ್ಬಿಟ್ಟಿದ್ದಾರೆ. ಕಿಶನ್ ನಡೆ ನೋಡಿ ಸಂಶಯಗೊಂಡ ಮನೆಯ ಸದಸ್ಯರಾದ ಶೈನ್ ಶೆಟ್ಟಿ, ವಾಸುಕಿ ವೈಭವ್ ಕೆದಕಿ ಕೇಳಿದಾಗ ಕಿಶನ್ ಈ ಬಗ್ಗೆ ಬಾಯ್ಬಿಟ್ಟಿದ್ದಾರೆ.
ಆದರೆ ಈ ಬಗ್ಗೆ ಹೆಚ್ಚಿಗೆ ಮಾತನಾಡುವುದು ಬೇಡ ಎಂದು ಕಿಶನ್ ಮತ್ತು ರಕ್ಷಾ ಮಾತಾಡಿಕೊಂಡರು. ಅತ್ತ ವಾಸುಕಿ ಬಳಿಯೂ ಹೆಚ್ಚು ಈ ಬಗ್ಗೆ ಇಲ್ಲಿ ಚರ್ಚೆ ಮಾಡಿದರೆ ರಕ್ಷಾ ತಪ್ಪಾಗಿ ತಿಳಿದುಕೊಳ್ಳಬಹುದು ಎಂದು ಸಮಜಾಯಿಷಿ ನೀಡಿದರು. ಆದರೆ ಕೆಲವು ಕ್ಷಣಗಳ ಕಾಲ ಕಿಶನ್ ರಕ್ಷಾರನ್ನು ನೋಡಿ ಏಕಾಂಗಿಯಾಗಿ ಶಾಕ್ ನಲ್ಲಿ ನಿಂತಿರುವುದು ಮಾತ್ರ ಕಂಡುಬಂತು.