Publish Date: Sun, 01 Dec 2019 (11:23 IST)
Updated Date: Sun, 01 Dec 2019 (11:25 IST)
ಬೆಂಗಳೂರು: ವಾರದ ಕತೆ ಕಿಚ್ಚನ ಜತೆ ಶೋ ನಡುವೆ ಸ್ಪರ್ಧಿಗಳೊಂದಿಗೆ ಮಾತುಕತೆ ನಡೆಸುವಾಗ ಕಿಚ್ಚ ಸುದೀಪ್ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಎರಡನೇ ಬಾರಿಗೆ ಮನೆ ಪ್ರವೇಶಿಸಿರುವ ಚೈತ್ರಾ ಕೋಟೂರ್ ಗೆ ಎಚ್ಚರಿಕೆ ನೀಡಿದ್ದಾರೆ.
ಕಿಶನ್ ಬಳಿ ಚೈತ್ರಾ ಬಗ್ಗೆ ಕೇಳಿದಾಗ ಅವರು ತಮ್ಮ ಅಭಿಪ್ರಾಯ ಹೇಳುತ್ತಿದ್ದರು. ಈ ವೇಳೆ ಚೈತ್ರಾ ನಡುವೆ ಬಾಯಿ ಹಾಕಿ ತಮ್ಮನ್ನು ಸಮರ್ಥಿಸಲು ಮುಂದಾದರು. ಇದು ಕಿಚ್ಚ ಸುದೀಪ್ ಗೆ ಇಷ್ಟವಾಗಲಿಲ್ಲ.
ಹೀಗಾಗಿ ಚೈತ್ರಾಗೆ ಸ್ವಲ್ಪ ತಾಳ್ಮೆಯಿಂದಿರಿ. ಈ ತಪ್ಪು ಮತ್ತೆ ಮಾಡಬೇಡಿ. ಯಾಕೆಂದರೆ ಇದು ಎರಡನೇ ಬಾರಿ ನಿಮಗೆ ನಾನು ಈ ವಿಚಾರದಲ್ಲಿ ಎಚ್ಚರಿಕೆ ನೀಡುತ್ತಿದ್ದೇನೆ ಎಂದಾಗ ಚೈತ್ರಾ ಸುದೀಪ್ ಬಳಿ ಕ್ಷಮೆ ಯಾಚಿಸಿದ್ದಾರೆ.