ಬಿಗ್ ಬಾಸ್ ಕನ್ನಡ: ದೀಪಿಕಾ ದಾಸ್ ಕಿರುನಗೆಯಿಂದ ಹುಚ್ಚನಾದ ಶೈನ್ ಶೆಟ್ಟಿ!

ಶುಕ್ರವಾರ, 29 ನವೆಂಬರ್ 2019 (10:00 IST)
ಬೆಂಗಳೂರು: ಶೈನ್ ಶೆಟ್ಟಿ ಉದ್ದ ದಾಡಿಗೆ ಕತ್ತರಿ ಹಾಕಲು ಬಿಗ್ ಬಾಸ್ ದೀಪಿಕಾ ದಾಸ್ ಗೆ ಸೀಕ್ರೆಟ್ ಟಾಸ್ಟ್ ಕೊಟ್ಟಿದ್ದರು. ಇದಾದ ಬಳಿಕ ದೀಪಿಕಾ ಶೈನ್ ಗೆ ಗಡ್ಡಕ್ಕೆ ಕತ್ತರಿ ಹಾಕುವಂತೆ ದಂಬಾಲು ಬಿದ್ದಿದ್ದೇ ಬಿದ್ದಿದ್ದು. ಇದೀಗ ಶೈನ್ ಒಂಚೂರು ಅತಿಯಾಗಿ ಆಡಲು ಶುರು ಮಾಡಿದ್ದಾರೆ!


ದೀಪಿಕಾ ಮೇಲೆ ಶೈನ್ ಗೆ ಸಂಶಯ ಬಂದಿದೆ. ಬೇಕೆಂದೇ ಇದುವರೆಗೆ ಏನೂ ಹೇಳದ ದೀಪಿಕಾ ಈಗ ಬೇಕೆಂದೇ ಗಡ್ಡ ತೆಗೆಯಲು ಒತ್ತಾಯ ಮಾಡುತ್ತಿರುವುದು ಸೀಕ್ರೆಟ್ ಟಾಸ್ಕ್ ಆಗಿರಬಹುದು ಎಂದು ಶೈನ್ ಗೆ ಸಂಶಯ ಬಂದಿದೆ. ಹೀಗಾಗಿ ದೀಪಿಕಾ ಬಾಯಿಂದ ಸತ್ಯ ಹೊರಹಾಕಲು ಶೈನ್ ಕೂಡಾ ಪ್ರಯತ್ನ ನಡೆಸುತ್ತಿದ್ದಾರೆ.

ಅದಕ್ಕಾಗಿ ದೀಪಿಕಾ ಬಗ್ಗೆ ರೊಮ್ಯಾಂಟಿಕ್ ಹಾಡು ಹಾಡಿ ಕಿಚ‍ನ್ ಏರಿಯಾದಲ್ಲಿ ಕೆಣಕುತ್ತಿದ್ದರು. ಇದನ್ನು ನೋಡಿ ಹೊಟ್ಟೆ ಉರಿದುಕೊಂಡ ಕಿಶನ್ ಯಾಕೆ ನೀವು ದೀಪಿಕಾಗೆ ಹಾಡು ಹೇಳ್ತಿದ್ದೀರಿ? ಏನು ನಿಮ್ಮ ಕತೆ ಎಂದು ಕೇಳಿದ್ದಕ್ಕೆ ಶೈನ್ ನಾನು ಹಾಡಿದಾಗ ಅವರು ಆ ಕಡೆ ತಿರುಗಿ ಒಂದು ಕಿರು ನಗೆ ನಗ್ತಾರಲ್ಲಾ? ಆಗಲೇ ನನಗೆ ಗೊತ್ತಾಗ್ತಿದೆ ಏನೋ ಇದೆ ಅಂತ ಹಾಡುತ್ತಲೇ ಇದ್ದರು.

ಹೊರಗೆ ಕೂತಿದ್ದ ವಾಸುಕಿ ಶೈನ್ ಗೆ ಈ ವಾರ ಹುಚ್ಚು ಹಿಡಿದಿದೆ.ಹೇಗೇಗೋ ಆಡುತ್ತಿದ್ದಾರೆ ಎಂದರೆ ಶೈನ್ ಮತ್ತಷ್ಟು ದೀಪಿಕಾ ಹಿಂದೆ ಹಾಡುತ್ತಾ ಸುತ್ತುತ್ತಲೇ ಇದ್ದರು.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅವನೇ ಶ್ರೀಮನ್ನಾರಾಯಣದಲ್ಲಿ ರಿಷಬ್ ಶೆಟ್ಟಿ ಸರ್ಪ್ರೈಸ್ ಅತಿಥಿ!