Publish Date: Fri, 31 Jul 2020 (11:43 IST)
Updated Date: Fri, 31 Jul 2020 (11:44 IST)
ಬೆಂಗಳೂರು: ಮಾನಸಿಕವ ಖಿನ್ನತೆಯಿಂದ ಬಳಲುತ್ತಿದ್ದ ಬಿಗ್ ಬಾಸ್ ಸ್ಪರ್ಧಿ ಜಯಶ್ರೀ ದಯಾ ಮರಣ ನೀಡಿ, ನನಗೆ ಬದುಕಲು ಇಷ್ಟವಿಲ್ಲ ಎಂದೆಲ್ಲಾ ಫೇಸ್ ಬುಕ್ ನಲ್ಲಿ ವಿಡಿಯೋ ಮಾಡಿ ಸುದ್ದಿಯಾಗಿದ್ದರು.
ಅದಾದ ಬಳಿಕ ಕಿಚ್ಚ ಸುದೀಪ್ ಸಹಾಯ ಮಾಡಿದ್ದರು. ಜಯಶ್ರೀಗೆ ಹಣದ ಸಹಾಯದ ಜತೆ ಮಾನಸಿಕವಾಗಿಯೂ ಧೈರ್ಯ ತುಂಬಿದ್ದರು. ಕಿಚ್ಚನ ಮಾತಿಗೆ ಬೆಲೆಕೊಟ್ಟು ಜಯಶ್ರೀ ಆತ್ಮಹತ್ಯೆ ನಿರ್ಧಾರ ಮಾಡಲ್ಲ ಎಂದು ಹೇಳಿಕೊಂಡಿದ್ದರು.
ಇದೀಗ ಜಯಶ್ರೀ ತಮ್ಮ ತಲೆ ಕೂದಲು ಸಂಪೂರ್ಣವಾಗಿ ಕತ್ತರಿಸಿಕೊಂಡು ಹೊಸ ಲುಕ್ ನೊಂದಿಗೆ, ಹೊಸ ಉತ್ಸಾಹದೊಂದಿಗೆ ಜೀವನ ಆರಂಭಿಸಲು ಹೊರಟಿದ್ದಾರೆ.