Select Your Language

Notifications

webdunia
webdunia
webdunia
webdunia

ಮತ್ತೆ ಒಟಿಟಿಯಲ್ಲಿ ರಿಲೀಸ್ ಆಗಲಿದೆ ಈ ಸೂಪರ್ ಹಿಟ್ ಕನ್ನಡ ಸಿನಿಮಾ

ಮತ್ತೆ ಒಟಿಟಿಯಲ್ಲಿ ರಿಲೀಸ್ ಆಗಲಿದೆ ಈ ಸೂಪರ್ ಹಿಟ್ ಕನ್ನಡ ಸಿನಿಮಾ
ಬೆಂಗಳೂರು , ಗುರುವಾರ, 30 ಜುಲೈ 2020 (12:39 IST)
ಬೆಂಗಳೂರು: ಮಾರ್ಚ್ ನಲ್ಲಿ ಇದ್ದಕ್ಕಿದ್ದಂತೇ ಲಾಕ್ ಡೌನ್ ಘೋಷಿಸಿದಾಗ ಆಗಷ್ಟೇ ಥಿಯೇಟರ್ ನಲ್ಲಿ ಬಿಡುಗಡೆಯಾಗಿದ್ದ ಹಲವು ಸಿನಿಮಾಗಳು ದಿಕ್ಕು ತೋಚದಂತಾಗಿದ್ದವು.


ಅಂತಹದ್ದೇ ಒಂದು ಸಿನಿಮಾಗಳಲ್ಲಿ ಒಂದು ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸುರತ್ಕಲ್. ಈ ಸಿನಿಮಾ ಈಗ ಮತ್ತೆ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಆಗಸ್ಟ್ 7 ರಂದು ಸಿನಿಮಾ ಆಪ್ ನಲ್ಲಿ ರಿಲೀಸ್ ಆಗಲಿದೆ.

ಈ ಸಿನಿಮಾಕ್ಕೆ ಥಿಯೇಟರ್ ನಲ್ಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿತ್ತು. ಈ ನಡುವೆ ಹಿಂದಿಗೂ ರಿಮೇಕ್ ಆಗುವ ಸುದ್ದಿ ಬಂದಿತ್ತು. ಆದರೆ ಲಾಕ್ ಡೌನ್ ಚಿತ್ರದ ಗಳಿಕೆ ಮೇಲೆ ಕಲ್ಲು ಹಾಕಿತ್ತು. ಹೀಗಾಗಿ ಚಿತ್ರತಂಡ ಇದೀಗ ಸಿನಿಮಾವನ್ನು ರಿ ರಿಲೀಸ್ ಮಾಡಲು ಮುಂದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ನ ಸಂಭಾವ್ಯ ಪಟ್ಟಿಯಲ್ಲಿ ತಮ್ಮ ಹೆಸರು ಕೇಳಿ ಗರಂ ಆದ ನಟಿ ಶ್ರದ್ಧಾ ದಾಸ್