Select Your Language

Notifications

webdunia
webdunia
webdunia
webdunia

ವರನಟ ಡಾ. ರಾಜ್ ಅಪಹರಣ ಪ್ರಕರಣಕ್ಕೆ 20 ವರ್ಷ: ಅಂದಿನ ಘಟನೆಯ ಮೆಲುಕು ಇಲ್ಲಿದೆ

ವರನಟ ಡಾ. ರಾಜ್ ಅಪಹರಣ ಪ್ರಕರಣಕ್ಕೆ 20 ವರ್ಷ: ಅಂದಿನ ಘಟನೆಯ ಮೆಲುಕು ಇಲ್ಲಿದೆ
ಬೆಂಗಳೂರು , ಗುರುವಾರ, 30 ಜುಲೈ 2020 (10:27 IST)
ಬೆಂಗಳೂರು: ವರನಟ, ಡಾ. ರಾಜ್ ಕುಮಾರ್ ಕಾಡುಗಳ್ಳ ವೀರಪ್ಪನ್ ಅಪಹರಿಸಿದ ಕರಾಳ ದಿನಕ್ಕೆ ಇಂದು 20 ವರ್ಷ ತುಂಬಿದೆ. ಡಾ. ರಾಜ್ ನಿವಾಸದಿಂದ ರಾತ್ರೋ ರಾತ್ರಿ ವೀರಪ್ಪನ್ ಅಪಹರಣ ಮಾಡಿದ್ದ.


ಈ ಘಟನೆ ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿತ್ತು. ಅಭಿಮಾನಿಗಳು ತಲ್ಲಣಗೊಳ್ಳುವಂತೆ ಮಾಡಿತ್ತು. ಇದಾದ ಬಳಿಕ ಬರೋಬ್ಬರಿ 108 ದಿನಗಳ ಕಾಲ ಡಾ. ರಾಜ್ ವೀರಪ್ಪನ್ ವಶದಲ್ಲಿದ್ದರು.  ಹಲವು ಸುತ್ತಿನ ಸಂಧಾನದ ಬಳಿಕ ಡಾ. ರಾಜ್ ರನ್ನು ಬಿಡುಗಡೆ ಮಾಡಿದ್ದ.

ಅಂದು ನಡೆದಿದ್ದೇನು?: ಜುಲೈ 30 ರ ರಾತ್ರಿ ಗಾಜನೂರಿನ ಮನೆಯಲ್ಲಿ ಡಾ. ರಾಜ್ ಊಟ ಮುಗಿಸಿ ಎಲೆ ಅಡಿಕೆ ಹಾಕುತ್ತಾ ಕೂತಿದ್ದಾಗ ವೀರಪ್ಪನ್ ತನ್ನ ಸಹಚರರೊಂದಿಗೆ ಬಂದು ದಾಳಿ ಮಾಡಿದ್ದ. ಡಾ. ರಾಜ್ ರ ಬೆನ್ನಿಗೆ ಬಂದೂಕು ಹಿಡಿದು ಕೈಗಳನ್ನು ಕಟ್ಟಿ ವಶಕ್ಕೆ ತೆಗೆದುಕೊಂಡಿದ್ದ. ಡಾ. ರಾಜ್ ಜತೆಗೆ ಮನೆಯಲ್ಲಿದ್ದ ಮೂವರನ್ನು ಅಪಹರಿಸಿದ್ದ.

ಆ ವೇಳೆ ಪಾರ್ವತಮ್ಮ ರಾಜಕುಮಾರ್ ಅವರನ್ನು ಬಿಟ್ಟುಬಿಡು ಎಂದು ಪರಿ ಪರಿಯಾಗಿ ಬೇಡಿಕೊಂಡರೂ ಬಿಡಲಿಲ್ಲ. ಕೊನೆಗೆ ಡಾ. ರಾಜ್ ವೀರಪ್ಪನ್ ಜತೆ ಹೊರಡಲೇಬೇಕಾಯಿತು. ಈ ಸುದ್ದಿ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಘಟನೆಯಾದ ತಕ್ಷಣ ಮಧ್ಯರಾತ್ರಿ ವೇಳೆ ಪಾರ್ವತಮ್ಮ ಚಾಮರಾಜನಗರಕ್ಕೆ ಬಂದು ಅಲ್ಲಿಂದ ಎಸ್ ಟಿಡಿ ಬೂತ್ ಮೂಲಕ ಮಕ್ಕಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಚಿತ್ರರಂಗದ ಸಮಸ್ಯೆ ಬಗ್ಗೆ ಸಚಿವರ ಭೇಟಿಯಾದ ಸ್ಟಾರ್ ಗಳು: ಕಿಚ್ಚ-ದಚ್ಚು ಎಲ್ಲಿ ಹೋದ್ರು?