Publish Date: Thu, 30 Jul 2020 (11:10 IST)
Updated Date: Thu, 30 Jul 2020 (11:12 IST)
ಬೆಂಗಳೂರು: ಒಂದು ಕಾಲದಲ್ಲಿ ರಮ್ಯಾ ಮತ್ತು ರಕ್ಷಿತಾ ನಡುವೆ ಮುಸುಕಿನ ಗುದ್ದಾಟ ನಡೆದಿರಬಹುದು. ಆದರೆ ಈಗ ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಫ್ರೆಂಡ್ಸ್ ಆಗಿದ್ದಾರೆ.
ರಮ್ಯಾ ಮತ್ತೆ ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಕೊಟ್ಟಿದ್ದು, ರಕ್ಷಿತಾ ಹಾಗೂ ರಮ್ಯಾ ಇಬ್ಬರೂ ಈಗ ಪರಸ್ಪರರ ಖಾತೆಗಳನ್ನು ಫಾಲೋ ಮಾಡುವ ಮೂಲಕ ಹಳೆಯ ವೈಮನಸ್ಯವನ್ನು ಮರೆತು ಒಂದಾಗಿದ್ದಾರೆ.
ಇದೀಗ ರಮ್ಯಾ ತಮ್ಮ ಫೋಟೋವೊಂದನ್ನು ಪ್ರಕಟಿಸಿದ್ದಕ್ಕೆ ರಕ್ಷಿತಾ ಸ್ಮೈಲೀ ಮತ್ತು ಹಾರ್ಟ್ ಇಮೋಜಿ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಖುಷಿಯಾಗಿದ್ದು, ನೀವಿಬ್ಬರೂ ಹೀಗೇ ಜತೆಯಾಗಿ ಮತ್ತೆ ಒಂದೇ ವೇದಿಕೆಯಲ್ಲಿ ನೋಡುವುದನ್ನು ನಾವು ಕಾಯ್ತಿದ್ದೇವೆ ಎಂದಿದ್ದಾರೆ.