Select Your Language

Notifications

webdunia
webdunia
webdunia
webdunia

ಕೋಟಿಗೊಬ್ಬ 3 ಬಗ್ಗೆ ಅಪ್ ಡೇಟ್ ಕೊಟ್ಟ ಕಿಚ್ಚ ಸುದೀಪ್

ಕೋಟಿಗೊಬ್ಬ 3 ಬಗ್ಗೆ ಅಪ್ ಡೇಟ್ ಕೊಟ್ಟ ಕಿಚ್ಚ ಸುದೀಪ್
ಬೆಂಗಳೂರು , ಗುರುವಾರ, 30 ಜುಲೈ 2020 (13:15 IST)
ಬೆಂಗಳೂರು: ಲಾಕ್ ಡೌನ್ ನಿಂದಾಗಿ ಚಿತ್ರರಂಗ ಸ್ತಬ್ಧವಾಗಿದೆ. ಈ ನಡುವೆ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಸ್ಟಾರ್ ಗಳ ಸಿನಿಮಾ ಬಿಡುಗಡೆ ಯಾವಾಗ ಎಂಬ ಕುತೂಹಲ ಇದ್ದೇ ಇದೆ.


ಇದೀಗ ಕಿಚ್ಚ ಸುದೀಪ್ ತಮ್ಮ ಕೋಟಿಗೊಬ್ಬ 3 ಸಿನಿಮಾ ಬಗ್ಗೆ ಅಪ್ ಡೇಟ್ ಕೊಟ್ಟಿದ್ದಾರೆ. ಅತ್ತ ಡಿ ಬಾಸ್ ದರ್ಶನ್ ರ ರಾಬರ್ಟ್ ಮತ್ತೊಂದು ಪೋಸ್ಟರ್ ಬಿಡುಗಡೆ ಮಾಡಿದರೆ ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ 2 ಚಿತ್ರತಂಡ ಸಂಜಯ್ ದತ್ ಲುಕ್ ಅನಾವರಣಗೊಳಿಸುವ ಮೂಲಕ ಸುದ್ದಿಯಾಗುತ್ತಿದೆ.

ಆದರೆ ಕಿಚ್ಚನ ಕೋಟಿಗೊಬ್ಬ 3 ಸಿನಿಮಾ ಏನಾಯ್ತು ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಅಭಿಮಾನಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಕಿಚ್ಚ ಕೋಟಿಗೊಬ್ಬ 3 ಹೆಚ್ಚು ಕಡಿಮೆ ಕೆಲಸ ಮುಗಿದಿದೆ. ಆದರೆ ಸಣ್ಣ ಭಾಗದ ಕೆಲಸ ಬಾಕಿಯಿದೆ. ಅದನ್ನು ಕೊರೋನಾದಿಂದಾಗಿ ಮಾಡಲು ಸಾಧ‍್ಯವಾಗಿಲ್ಲ. ಪರಿಸ್ಥಿತಿ ತಿಳಿಯಾದ ಕೂಡಲೇ ಕೆಲಸ ಮುಗಿಸಿ ನಿಮ್ಮ ಮುಂದೆ ಬರಲಿದ್ದೇವೆ ಎಂದು ಕಿಚ್ಚ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿವಣ್ಣನೇ ಕರೆದರೂ ಸಭೆಗೆ ಗೈರಾಗಿದ್ದಕ್ಕೆ ಕಾರಣ ತಿಳಿಸಿದ ಜಗ್ಗೇಶ್