Publish Date: Sun, 02 Aug 2020 (12:11 IST)
Updated Date: Sun, 02 Aug 2020 (12:13 IST)
ಹೈದರಾಬಾದ್ : ಕೊರೊನಾ ನಡುವೆಯು ಇದೀಗ ಖ್ಯಾತ ರಿಯಾಲಿಟಿ ಶೋ ತೆಲುಗಿನ ಬಿಗ್ ಬಾಸ್ 4ರ ಚಿತ್ರೀಕರಣ ಪ್ರಾರಂಭವಾಗಿದೆ.
ಖ್ಯಾತ ನಟ ನಾಗಾರ್ಜುನ ಈ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದು, ಪ್ರೊಮೊ ಚಿತ್ರೀಕರಣ ಮುಗಿಸಿದ್ದಾರೆ. ಅನ್ನಪೂರ್ಣೇಶ್ವರಿ ಸ್ಟುಡಿಯೋದಲ್ಲಿ ಬಿಗ್ ಬಾಸ್ 4 ರ ಚಿತ್ರೀಕರಣ ಮಾಡಲಾಗಿದೆ.
ಹಾಗೇ ಪ್ರೊಮೊ ಶೂಟಿಂಗ್ ನ ಚಿತ್ರವನ್ನು ಪೋಸ್ಟ್ ಮಾಡಿರುವ ನಾಗಾರ್ಜುನ ಅವರು ಚಿತ್ರೀಕರಣದಲ್ಲಿ ತೆಗೆದುಕೊಂಡ ಮುಂಜಾಗೃತ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಸೆಟ್ ನಲ್ಲಿ ಮೇಕಪ್ ಮ್ಯಾನ್ ಗಳು ಪಿಪಿಇ ಕಿಟ್ ಧರಿಸಿ ಕೆಲಸ ಮಾಡುತ್ತಿದ್ದು, ಸರ್ಕಾರದ ವಿಧಿಸಿದ ಕೊರೊನಾ ನಿಯಮಗಳನ್ನು ಪಾಲಿಸಿರುವುದಾಗಿ ತಿಳಿಸಿದ್ದಾರೆ.
pavithra
Publish Date: Sun, 02 Aug 2020 (12:11 IST)
Updated Date: Sun, 02 Aug 2020 (12:13 IST)