ನಿರ್ದೇಶಕ ಕೊರಟಾಲ ಶಿವ ಜೊತೆ ಹೊಸ ಸಿನಿಮಾ ಘೋಷಣೆ ಮಾಡಿದ ಅಲ್ಲು ಅರ್ಜುನ್

ಶನಿವಾರ, 1 ಆಗಸ್ಟ್ 2020 (12:40 IST)
ಹೈದರಾಬಾದ್ : ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ಇದೀಗ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ.

ಜುಲೈ 31ರಂದು ತಮ್ಮ ಅಜ್ಜ ಅಲ್ಲು ರಾಮಲಿಂಗಯ್ಯ  ಅವರ 16ನೇ ಪುಣ್ಯ ತಿಥಿ ಪ್ರಯುಕ್ತ ತಮ್ಮ ತಾತನನ್ನು ನೆನೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಆ ವೇಳೆ ತಾವು ನಿರ್ದೇಶಕ ಕೊರಟಾಲ ಶಿವ ಜೊತೆ ಸಿನಿಮಾ ಮಾಡುತ್ತಿರುವುದಾಗಿ ಹೊಸ ಚಿತ್ರದ ಘೋಷಣೆ ಮಾಡಿದ್ದಾರೆ.

ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘ಎಎ21’ ಎಂದು ಶೀರ್ಷಿಕೆ ಇಡಲಾಗಿದ್ದು, ಚಿತ್ರಕ್ಕೆ ಇನ್ನು ಅಧಿಕೃತ ಹೆಸರು ಘೋಷಣೆಯಾಗಿಲ್ಲ. ಈ ಚಿತ್ರದ ವಿಶೇಷ ಪೋಸ್ಟರ್ ನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ. ಈ ಚಿತ್ರ 2022 ಆರಂಭದಲ್ಲಿ ಜಗತ್ತಿನಾದ್ಯಂತ ಬಿಡುಗಡೆಯಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಈ ಕಾರಣಕ್ಕೆ ನಟಿ ತಮನ್ನಾ ಹಾಗೂ ಕೊಹ್ಲಿಯ ವಿರುದ್ಧ ಮದ್ರಾಸ್ ಹೈಕೋರ್ಟ್ ನಲ್ಲಿ ದೂರು ದಾಖಲು