ರಾಬರ್ಟ್ ಬಿಡುಗಡೆಗೂ ಮೊದಲೇ ದರ್ಶನ್ ಜತೆ ಮತ್ತೊಂದು ಸಿನಿಮಾ ಅನೌನ್ಸ್ ಮಾಡಿದ ತರುಣ್ ಸುಧೀರ್

ಶನಿವಾರ, 1 ಆಗಸ್ಟ್ 2020 (12:06 IST)
ಬೆಂಗಳೂರು: ಕೊರೋನಾದಿಂದಾಗಿ ರಾಬರ್ಟ್ ಸಿನಿಮಾ ಇನ್ನೂ ಬಿಡುಗಡೆಯಾಗಿಲ್ಲ. ಹಾಗಿದ್ದರೂ ಈ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಕ್ರೇಜ್ ಏನೂ ಕಡಿಮೆಯಾಗಿಲ್ಲ.


ಇದೀಗ ರಾಬರ್ಟ್ ಬಿಡುಗಡೆಯಾಗುವ ಮೊದಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿ ಮತ್ತೊಂದು ಸಿನಿಮಾ ಮಾಡುವ ಬಗ್ಗೆ ನಿರ್ದೇಶಕ ತರುಣ್ ಸುಧೀರ್ ಘೋಷಿಸಿದ್ದಾರೆ.

ನಿನ್ನೆ ವರಮಹಾಲಕ್ಷ್ಮಿ ಹಬ್ಬ ನಿಮಿತ್ತ ಹೊಸ ಸಿನಿಮಾಗೆ ಸ್ಕ್ರಿಪ್ಟ್ ಬರೆಯುವ ಕೆಲಸ ಶುರು ಮಾಡಿಕೊಂಡಿದ್ದಾರೆ ತರುಣ್. ಅಂದ ಹಾಗೆ ಈ ಸಿನಿಮಾವೂ ಉಮಾಪತಿ ಗೌಡ ನಿರ್ಮಾಣದಲ್ಲೇ ಲಾಂಚ್ ಆಗಲಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸಂಭಾವನೆ ಹೆಚ್ಚಿಸಿಕೊಂಡ ನಟಿ ಪೂಜಾ ಹೆಗ್ಡೆ