Select Your Language

Notifications

webdunia
webdunia
webdunia
webdunia

ತಂದೆಯೇ ವಿಷ ಹಾಕಿ ಸಾಯಿಸಲು ಹೊರಟ ಕತೆ ಹೇಳಿದ ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಸುರೇಶ್

ತಂದೆಯೇ ವಿಷ ಹಾಕಿ ಸಾಯಿಸಲು ಹೊರಟ ಕತೆ ಹೇಳಿದ ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಸುರೇಶ್
ಬೆಂಗಳೂರು , ಶುಕ್ರವಾರ, 26 ಮಾರ್ಚ್ 2021 (11:32 IST)
ಬೆಂಗಳೂರು: ಬಿಗ್  ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿರುವ ದಿವ್ಯಾ ಸುರೇಶ್ ತಮ್ಮ ತಂದೆಯೇ ತಮಗೆ ವಿಷ ಹಾಕಿ ಸಾಯಿಸಲು ಹೊರಟ ಕಹಿ ಘಟನೆಯೊಂದನ್ನು ಎಲ್ಲರೆದುರು ಬಿಚ್ಚಿಟ್ಟಿದ್ದಾರೆ.


ನಿನ್ನೆಯ ಎಪಿಸೋಡ್ ನಲ್ಲಿ ಬಿಗ್ ಬಾಸ್ ಎಲ್ಲಾ ಸದಸ್ಯರಿಗೂ ಇದುವರೆಗೆ ಯಾರೂ ಹೇಳದ ಗುಟ್ಟೊಂದನ್ನು ಹೇಳುವ ಅವಕಾಶವನ್ನು ನೀಡಿದ್ದರು. ಅಂತಹ ಅವಕಾಶ ಸಿಕ್ಕಾಗ ದಿವ್ಯಾ ಸುರೇಶ್ ತಮ್ಮ ತಂದೆಯೇ ವಿಷ ಹಾಕಿ ಸಾಯಿಸಲು ಹೊರಟ ಕತೆ ಹೇಳಿದ್ದಾರೆ.

ಯಾವತ್ತೂ ನಮ್ಮ ತಂದೆ ನಮಗೆ ಊಟ ತಿನ್ನಿಸಿದವರೇ ಅಲ್ಲ. ಆವತ್ತು ನನಗೆ ಮತ್ತು ಅಣ್ಣನಿಗೆ ಊಟ ಕಲಸಿ ಕೊಟ್ಟು ಅವರೂ ತಿಂದರು. ಸ್ವಲ್ಪ ಹೊತ್ತಿಗೆ ನನ್ನ ಅಣ್ಣ ವಾಂತಿ ಮಾಡಲು ಶುರು ಮಾಡಿದ. ಬಳಿಕ ನಮ್ಮ ತಂದೆಯೂ ವಾಂತಿ ಮಾಡಲು ಶುರು ಮಾಡಿದ. ಬಳಿಕ ನನಗೂ ವಾಂತಿಯಾಗಲು ಶುರುವಾಯಿತು. ನಾವು ಮೂರೂ ಜನ ಬದುಕಬಾರದು ಎಂದು ಅಪ್ಪ ವಿಷ ಹಾಕಿದ್ದರು. ಅಮ್ಮ ಆವತ್ತು ಊರಲ್ಲಿರಲಿಲ್ಲ. ಊರಿನವರೆಲ್ಲಾ ನಮಗೆ ಉಪ್ಪು ನೀರು ಕುಡಿಸ್ತಾರೆ. ಬಳಿಕ ಊರಿನವರೇ ಪಕ್ಕದ ಸರ್ಕಾರಿ ಆಸ್ಪತ್ರೆಗೆ ದಾಖಲಿಸ್ತಾರೆ. ಇದರಿಂದಾಗಿ ನಾನು ಜೀವನದಲ್ಲಿ ಸ್ಟ್ರಾಂಗ್ ಆಗ್ತೀನಿ ಎಂದು ದಿವ್ಯಾ ಹೇಳಿಕೊಂಡು ಬಿಕ್ಕಿ ಬಿಕ್ಕಿ ಅಳ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಧನುಷ್ ‘ಕರ್ಣನ್’ ಚಿತ್ರದ ಈ ಸಾಂಗ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ. ಕಾರಣವೇನು ಗೊತ್ತಾ?