Select Your Language

Notifications

webdunia
webdunia
webdunia
webdunia

ಸೂಪರ್ ಸ್ಟಾರ್ ಜೆಕೆ ಹೊಸ ಶೋ ಆರಂಭಕ್ಕೆ ಡೇಟ್ ಫಿಕ್ಸ್

ಸೂಪರ್ ಸ್ಟಾರ್ ಜೆಕೆ ಹೊಸ ಶೋ ಆರಂಭಕ್ಕೆ ಡೇಟ್ ಫಿಕ್ಸ್
ಬೆಂಗಳೂರು , ಭಾನುವಾರ, 28 ಜುಲೈ 2019 (08:55 IST)
ಬೆಂಗಳೂರು: ಕಿರುತೆರೆ, ಹಿರಿತೆರೆಯಲ್ಲಿ ಎರಡರಲ್ಲೂ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ನಟ ಜಯರಾಮ್ ಕಾರ್ತಿಕ್ ಅಲಿಯಾಸ್ ಜೆಕೆ ಕಾಮಿಡಿ ಶೋ ಒಂದರ ತೀರ್ಪುಗಾರರಾಗುತ್ತಿರುವ ಸುದ್ದಿ ಓದಿರುತ್ತೀರಿ.


ಆದರೆ ಆ ಶೋ ಆರಂಭವಾಗುವುದು ಯಾವಾಗ ಎಂದು ಡೇಟ್ ಅನೌನ್ಸ್ ಆಗಿರಲಿಲ್ಲ. ಈಗ ಅದು ಬಹಿರಂಗವಾಗಿದೆ. ಕಲರ್ಸ್ ಕನ್ನಡದಲ್ಲಿ ಆಗಸ್ಟ್ 10 ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 9.30 ಕ್ಕೆ ಶೋ ಪ್ರಸಾರವಾಗಲಿದೆ.

ವಿಶೇಷವೆಂದರೆ ಈ ಶೋನಲ್ಲಿ ಜೆಕೆ ಜತೆಗೆ ತೀರ್ಪುಗಾರರಾಗಿ ಅವರ ಬಿಗ್ ಬಾಸ್ ಸಹವರ್ತಿ ಕೃಷಿ ತಾಪಂಡ ಇರಲಿದ್ದಾರೆ. ಇನ್ನು, ಅಕುಲ್ ಬಾಲಾಜಿ ಆಂಕರಿಂಗ್ ಇರಲಿದೆ. ಹೀಗಾಗಿ ಶೋ ಕಲರ್ ಫುಲ್ ಆಗಿ ಇರಲಿದೆ ಎನ್ನುವುದರಲ್ಲಿ ಅನುಮಾನ ಬೇಡ.

Share this Story:

Follow Webdunia kannada

ಮುಂದಿನ ಸುದ್ದಿ

ಇಂಡೋನೇಷ್ಯಾದಲ್ಲಿ ನಟಿ ಹರಿಪ್ರಿಯಾ ಬೋಲ್ಡ್ ಅವತಾರ