Select Your Language

Notifications

webdunia
webdunia
webdunia
webdunia

ಜೆಕೆ ಬಾಡಿ ಬಿಲ್ಡಿಂಗ್ ಮಾಡುತ್ತಿರುವುದರ ಹಿಂದಿನ ರಹಸ್ಯ ಬಯಲಾಯ್ತು!

ಜೆಕೆ ಬಾಡಿ ಬಿಲ್ಡಿಂಗ್ ಮಾಡುತ್ತಿರುವುದರ ಹಿಂದಿನ ರಹಸ್ಯ ಬಯಲಾಯ್ತು!
ಬೆಂಗಳೂರು , ಗುರುವಾರ, 25 ಜುಲೈ 2019 (09:31 IST)
ಬೆಂಗಳೂರು: ಅಶ್ವಿನಿ ನಕ್ಷತ್ರ ಧಾರವಾಹಿ ಮೂಲಕ ಕನ್ನಡ ಪ್ರೇಕ್ಷಕರಿಗೆ ಸೂಪರ್ ಸ್ಟಾರ್ ಜೆಕೆ ಎಂದೇ ಪರಿಚಿತರಾಗಿರುವ ನಟ ಜಯರಾಮ್ ಕಾರ್ತಿಕ್ ಈಗೀಗ ದೇಹ ಹುರಿಗೊಳಿಸುವ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಪ್ರಕಟಿಸುತ್ತಲೇ ಇರುತ್ತಾರೆ.


ಇದೀಗ ಅದರ ಹಿಂದಿನ ರಹಸ್ಯ ಬಯಲಾಗಿದೆ. ಅಷ್ಟಕ್ಕೂ ಜೆಕೆ ಯಾಕೆ ಈ ಮಟ್ಟಿಗೆ ಬಾಡಿ ಬಿಲ್ಡಿಂಗ್ ಮಾಡುತ್ತಿದ್ದಾರೆ ಎಂಬುದಕ್ಕೆ ಈಗ ಉತ್ತರ ಸಿಕ್ಕಿದೆ.

ಸ್ಟಾರ್ ಪ್ಲಸ್ ಚಾನೆಲ್ ನಲ್ಲಿ ಸೀತಾ ಎನ್ನುವ ಹಿಂದಿ ಧಾರವಾಹಿಯಲ್ಲಿ ರಾವಣನ ಪಾತ್ರ ಮಾಡಿ ಮಿಂಚಿದ್ದ ಜೆಕೆ ಈಗ ಮತ್ತೆ ಹಿಂದಿಯ ಪೌರಾಣಿಕ ಧಾರವಾಹಿಯೊಂದರಲ್ಲಿ ರಾವಣನ ಪಾತ್ರ ಮಾಡಲಿದ್ದಾರಂತೆ. ಅದಕ್ಕಾಗಿಯೇ ಈ ತಯಾರಿ ಮಾಡುತ್ತಿದ್ದಾರೆ. ಸೆಪ್ಟೆಂಬರ್ ನಿಂದ ಈ ಧಾರವಾಹಿ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ. ಅದರ ಜತೆಗೆ ಜೆಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಾಮಿಡಿ ಶೋ ಒಂದಕ್ಕೂ ತೀರ್ಪುಗಾರರಾಗಿ ಕೆಲಸ ಮಾಡಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಿಚ್ಚ ಸುದೀಪ್ ಪೈಲ್ವಾನ್ ಬಿಡುಗಡೆ ಮುಂದಕ್ಕೆ?! ಕಾರಣವೇನು ಗೊತ್ತಾ?