Select Your Language

Notifications

webdunia
webdunia
webdunia
webdunia

ಸಾಹಸ ಸಿಂಹ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಸೀರಿಯಲ್ ಗೆ ಎಂಟ್ರಿ

ಸಾಹಸ ಸಿಂಹ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಸೀರಿಯಲ್ ಗೆ ಎಂಟ್ರಿ
ಬೆಂಗಳೂರು , ಬುಧವಾರ, 24 ಜುಲೈ 2019 (08:44 IST)
ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಅಳಿಯ, ನಟ ಅನಿರುದ್ಧ್ ಇದೀಗ ಕಿರುತೆರೆಯತ್ತ ಮುಖ ಮಾಡಿದ್ದಾರೆ. ಹಿರಿತೆರೆಯಲ್ಲಿ ಇತ್ತೀಚೆಗೆ ಅಷ್ಟೇನೂ ಯಶಸ್ಸು ಪಡೆಯದ ಅನಿರುದ್ಧ್ ಈಗ ಜೀ ಕನ್ನಡ ವಾಹಿನಿಯ ಹೊಸ ಧಾರವಾಹಿಯೊಂದಕ್ಕೆ ನಾಯಕರಾಗುತ್ತಿದ್ದಾರೆ.


‘ಜೋಡಿಹಕ್ಕಿ’ ಧಾರವಾಹಿ ಖ್ಯಾತಿಯ ನಿರ್ದೇಶಕ ಆರೂರು ಜಗದೀಶ್ ‘ಜೊತೆ ಜೊತೆಯಲಿ’ ಎಂಬ ಹೊಸ ಧಾರವಾಹಿ ನಿರ್ಮಿಸುತ್ತಿದ್ದು, ಅದಕ್ಕೆ ಅನಿರುದ್ಧ್ ನಾಯಕರಾಗಿದ್ದಾರೆ.

ಮಧ್ಯ ವಯಸ್ಕ ಯಶಸ್ವಿ ಉದ್ಯಮಿಯ ಪಾತ್ರವನ್ನು ಅನಿರುದ್ಧ್ ನಿರ್ವಹಿಸುತ್ತಿದ್ದಾರೆ. ಇವರಿಗೆ ಚಿಕ್ಕ ವಯಸ್ಸಿನ ಹುಡುಗಿ ಹೇಗೆ ಜೊತೆಯಾಗುತ್ತಾಳೆ ಎನ್ನುವುದೇ ಈ ಧಾರವಾಹಿಯ ಕತೆ. ಈ ಹಿಂದೆ ಜೊತೆ ಜೊತೆಯಲಿ ಎಂಬ ಟೈಟಲ್ ನಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾಗಿದ್ದ ಧಾರವಾಹಿ ಹಿಟ್ ಆಗಿತ್ತು. ಈಗ ಅದೇ ಟೈಟಲ್ ನಲ್ಲಿ ಮತ್ತೊಂದು ಧಾರವಾಹಿ ಶೀಘ್ರದಲ್ಲೇ  ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾರು ಚಾಲಕನ ಮೇಲೆ ಹೃದಯವಂತಿಕೆ ಮೆರೆದ ಕಿಚ್ಚ ಸುದೀಪ್