Select Your Language

Notifications

webdunia
webdunia
webdunia
webdunia

ಇದೇ ಭಾನುವಾರ ಕುರುಕ್ಷೇತ್ರ ಅಡಿಯೋ ರಿಲೀಸ್ ಪ್ರಸಾರ

ಇದೇ ಭಾನುವಾರ ಕುರುಕ್ಷೇತ್ರ ಅಡಿಯೋ ರಿಲೀಸ್ ಪ್ರಸಾರ
ಬೆಂಗಳೂರು , ಮಂಗಳವಾರ, 23 ಜುಲೈ 2019 (10:02 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಬಹುತಾರಾಗಣವಿರುವ ಕುರುಕ್ಷೇತ್ರ ಸಿನಿಮಾ ಅಡಿಯೋ ರಿಲೀಸ್ ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದಿತ್ತು.


ಈ ಕಾರ್ಯಕ್ರಮ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ ಎಂಬುದು ಈ ಮೊದಲೇ ಗೊತ್ತಾಗಿತ್ತು. ಆದರೆ ಯಾವಾಗ ಈ ಕಾರ್ಯಕ್ರಮ ಪ್ರಸಾರವಾಗಲಿದೆ ಎಂಬುದನ್ನು ಬಹಿರಂಗಪಡಿಸಿರಲಿಲ್ಲ.

ಈಗ ಜೀ ವಾಹಿನಿ ಇದೇ ಭಾನುವಾರ ಅಪರಾಹ್ನ 4 ಕ್ಕೆ ಈ ಕಾರ್ಯಕ್ರಮ ಪ್ರಸಾರ ಮಾಡುತ್ತಿರುವುದಾಗಿ ಘೋಷಿಸಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅದ್ಧೂರಿ ಎಂಟ್ರಿ, ಕುರುಕ್ಷೇತ್ರದ ನಟ-ನಟಿಯರು ಮತ್ತು ಜೀ ವಾಹಿನಿಯ ಜನಪ್ರಿಯ ತಾರೆಯರ ನೃತ್ಯಗಳು, ಮನರಂಜನೆ ಕಾರ್ಯಕ್ರಮಗಳು ಇದರಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಳೇ ಸೂಪರ್ ಹಿಟ್ ಸಿನಿಮಾಗಳ ಟೈಟಲ್ ನಲ್ಲಿ ಮತ್ತೆ ಬರುತ್ತಿದೆ ಎರಡು ಧಾರವಾಹಿಗಳು