Select Your Language

Notifications

webdunia
webdunia
webdunia
webdunia

ಉಪೇಂದ್ರ ಪತ್ನಿ ಪ್ರಿಯಾಂಕಾ ಕಿರುತೆರೆಯಲ್ಲಿ ಹೊಸ ಅವತಾರದಲ್ಲಿ

ಉಪೇಂದ್ರ ಪತ್ನಿ ಪ್ರಿಯಾಂಕಾ ಕಿರುತೆರೆಯಲ್ಲಿ ಹೊಸ ಅವತಾರದಲ್ಲಿ
ಬೆಂಗಳೂರು , ಶುಕ್ರವಾರ, 26 ಜುಲೈ 2019 (09:11 IST)
ಬೆಂಗಳೂರು: ಇತ್ತೀಚೆಗಷ್ಟೇ ಬಿಡುಗಡೆಯಾದ ದೇವಕಿ ಚಿತ್ರದ ಯಶಸ್ಸಿನ ಗುಂಗಿನಲ್ಲಿರುವ ರಿಯಲ್‍ ಸ್ಟಾರ್ ಉಪೇಂದ್ರ ಪತ್ನಿ, ನಟಿ ಪ್ರಿಯಾಂಕಾ ಉಪೇಂದ್ರ ಈಗ ಕಿರುತೆರೆಗೆ ಕಾಲಿಟ್ಟಿದ್ದಾರೆ.

 

ಅಷ್ಟಕ್ಕೂ ಉಪೇಂದ್ರ ಪತ್ನಿಗೆ ಕಿರುತೆರೆಯಲ್ಲಿ ಏನು ಕೆಲಸ ಅಂತೀರಾ? ಪ್ರಿಯಾಂಕಾ ಕಿರುತೆರೆಯಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಧಾರವಾಹಿಯೊಂದರ ಪ್ರಮೋಷನ್ ಕೆಲಸಕ್ಕೆ ಪ್ರಿಯಾಂಕಾ ಸಾಥ್ ನೀಡಿದ್ದಾರೆ.

ಉದಯ ಟಿವಿಯಲ್ಲಿ ಹೊಸದಾಗಿ ಆರಂಭವಾಗಲಿರುವ ‘ನಾನು ನನ್ನ ಕನಸು’ ಧಾರವಾಹಿಯ ಪ್ರಮೋಷನ್ ಗೆ ಪ್ರಿಯಾಂಕಾ ಉಪೇಂದ್ರ ಬಂದಿದ್ದಾರೆ. ಈ ಹಿಂದೆ ನಟಿ ಹರಿಪ್ರಿಯಾ ‘ನಾಯಕಿ’ ಧಾರವಾಹಿಯ ಪ್ರಮೋಷನ್ ಮಾಡಿದ್ದರು. ಅದೇ ರೀತಿ ಈಗ ಪ್ರಿಯಾಂಕಾ ಉಪೇಂದ್ರ ಕೂಡಾ ಧಾರವಾಹಿಯ ಪಾತ್ರಧಾರಿಗಳನ್ನು ಪರಿಚಯಿಸುವ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಂಪಲ್ ಕ್ವೀನ್ ರಚಿತಾ ರಾಮ್ ಗೆ ಹೊಸ ಹೆಸರಿಟ್ಟ ರಮೇಶ್ ಅರವಿಂದ್