Publish Date: Fri, 26 Jul 2019 (09:06 IST)
Updated Date: Fri, 26 Jul 2019 (09:09 IST)
ಬೆಂಗಳೂರು: ರಮೇಶ್ ಅರವಿಂದ್ ನಿರ್ದೇಶನದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ‘100’ ಎನ್ನುವ ಚಿತ್ರವೊಂದರಲ್ಲಿ ನಟಿಸುತ್ತಿರುವ ಸುದ್ದಿ ನಿಮಗೆಲ್ಲಾ ಗೊತ್ತೇ ಇರುತ್ತದೆ.
ರಮೇಶ್ ಅರವಿಂದ್ ಹೇಳಿ ಕೇಳಿ ಲವ ಲವಿಕೆಯ ನಟ, ನಿರ್ದೇಶಕ. ತಮ್ಮ ಸೆಟ್ ನಲ್ಲೂ ಸಹ ನಟರನ್ನು ಹೀಗೇ ನಡೆಸಿಕೊಳ್ಳುತ್ತಾರೆ.
ಇಂತಿಪ್ಪ ರಮೇಶ್ ಅರವಿಂದ್ ರಚಿತಾ ರಾಮ್ ಗೆ ಹೊಸ ಹೆಸರಿಟ್ಟಿದ್ದಾರೆ. ರಚಿತಾ ರಾಮ್ ಮತ್ತು ಪೂರ್ಣ ನಡುವಿನ ದೃಶ್ಯದ ಚಿತ್ರೀಕರಣದ ವೇಳೆ ಕೊಂಚ ನಗು ಮೂಡಿಸಲು ರಚಿತಾಗೆ ನಿಕ್ ನೇಮ್ ಒಂದನ್ನು ನೀಡಿದ್ದಾರೆ.
ರಚಿತಾ ರಾಮ್ ರನ್ನು ‘ಮಿಸ್ ಬಬ್ಲೀ’ ಎಂದು ರಮೇಶ್ ಕರೆದಿದ್ದಾರೆ. ಕಾರಣ, ಸೆಟ್ ನಲ್ಲಿ ಯಾವತ್ತೂ ಬಬ್ಲಿಯಾಗಿರುವುದಕ್ಕೆ ಈ ನಿಕ್ ನೇಮ್ ಅವರಿಗೆ ಸೂಟ್ ಆಗುತ್ತದೆ ಎಂದಿದ್ದಾರೆ. ರಚಿತಾ ಕೂಡಾ ರಮೇಶ್ ಕೊಟ್ಟಿರುವ ಈ ಹೊಸ ಹೆಸರಿನಿಂದ ಖುಷಿಯಾಗಿದ್ದಾರೆ.