Publish Date: Thu, 25 Jul 2019 (10:21 IST)
Updated Date: Thu, 25 Jul 2019 (10:26 IST)
ಬೆಂಗಳೂರು: ಕಿಚ್ಚ ಸುದೀಪ್ ತಮ್ಮ ಸಿನಿಮಾ ಸೆಟ್ ಗೆ ಕ್ರೇಜಿಸ್ಟಾರ್ ರವಿಚಂದ್ರನ್ ಭೇಟಿ ಮಾಡಿದ್ದನ್ನು ಖುಷಿಯಿಂದಲೇ ಹಂಚಿಕೊಂಡಿದ್ದರು. ಆದರೆ ರವಿಚಂದ್ರನ್ ಸುದೀಪ್ ಭೇಟಿ ಮಾಡಿದ್ದು ಏಕೆ ಎಂಬುದರ ಹಿಂದಿನ ಕಾರಣ ಬಯಲಾಗಿದೆ.
ಹೊಸ ಲುಕ್ ನಲ್ಲಿದ್ದ ರವಿಚಂದ್ರನ್ ಫೋಟೋ ನೋಡಿ ಬಹುಶಃ ಕಿಚ್ಚನ ‘ಕೋಟಿಗೊಬ್ಬ 3’ ನಲ್ಲಿ ಪಾತ್ರ ಮಾಡುತ್ತಿರಬಹುದಾ ಎಂದೆಲ್ಲಾ ಅನುಮಾನಗಳು ಹುಟ್ಟಿಕೊಂಡಿತ್ತು. ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಈ ಇಬ್ಬರೂ ಆನ್ ಸ್ಕ್ರೀನ್ ಅಪ್ಪ-ಮಗನ ಭೇಟಿ ನಡೆದಿತ್ತು.
ಆದರೆ ಇದರ ಹಿಂದಿನ ಕಾರಣ ಈಗ ಬಯಲಾಗಿದೆ. ರವಿಚಂದ್ರನ್ ಮತ್ತೆ ಕಿಚ್ಚನ ಸಿನಿಮಾದಲ್ಲಿ ನಟಿಸುತ್ತಿಲ್ಲ. ಬದಲಾಗಿ ರವಿಚಂದ್ರನ್ ಕೂಡಾ ತಮ್ಮ ಸಿನಿಮಾ ಶೂಟಿಂಗ್ ಗೆಂದು ರಾಮೋಜಿ ಫಿಲ್ಮ್ ಸಿಟಿಗೆ ಬಂದಿದ್ದರು. ಈ ವೇಳೆ ಪಕ್ಕದಲ್ಲೇ ಸುದೀಪ್ ಇರುವ ಸುದ್ದಿ ತಿಳಿದು ರವಿಚಂದ್ರನ್ ದಿಡೀರ್ ಆಗಿ ಸೆಟ್ ಗೆ ಬಂದಿದ್ದಾರಷ್ಟೇ.