Publish Date: Wed, 24 Jul 2019 (09:12 IST)
Updated Date: Wed, 24 Jul 2019 (09:17 IST)
ಬೆಂಗಳೂರು: ಭುಜದ ಶಸ್ತ್ರಚಿಕಿತ್ಸೆಗಾಗಿ ಲಂಡನ್ ಗೆ ತೆರಳಿದ್ದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಇದೀಗ ಬೆಂಗಳೂರಿಗೆ ಮರಳಿದ್ದಾರೆ.
ಭುಜದ ಯಶಸ್ವಿ ಶಸ್ತ್ರಚಿಕಿತ್ಸೆ ಮುಗಿಸಿ ನಿನ್ನೆ ಸಂಜೆ ಬೆಂಗಳೂರಿಗೆ ಬಂದಿಳಿದಿದ್ದಾರೆ. ಕಳೆದ 10 ದಿನಗಳಿಂದ ಶಿವಣ್ಣ ಲಂಡನ್ ನಲ್ಲಿದ್ದರು.
ಹೀಗಾಗಿ ಈ ಬಾರಿ ಅವರ ಬರ್ತ್ ಡೇಯನ್ನೂ ಅಭಿಮಾನಿಗಳ ಜತೆ ಆಚರಿಸಿಕೊಂಡಿರಲಿಲ್ಲ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು. ಹೀಗಾಗಿ ತವರಿಗೆ ಬಂದ ಬಳಿಕ ಅಭಿಮಾನಿಗಳ ಜತೆ ಬರ್ತ್ ಡೇ ಆಚರಿಸಿಕೊಳ್ಳುವುದಾಗಿ ಹೇಳಿಕೊಂಡಿದ್ದರು.
ಇನ್ನು, ಶಸ್ತ್ರಚಿಕಿತ್ಸೆ ಮುಗಿದ ಹಿನ್ನಲೆಯಲ್ಲಿ ಕೆಲವು ದಿನಗಳ ಕಾಲ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಳ್ಳಲಿರುವ ಶಿವಣ್ಣ ಬಳಿಕವಷ್ಟೇ ತಾವು ಒಪ್ಪಿಕೊಂಡಿರುವ ಚಿತ್ರಗಳ ಚಿತ್ರೀಕರಣ ಮುಗಿಸಿಕೊಡಲಿದ್ದಾರೆ.