Select Your Language

Notifications

webdunia
webdunia
webdunia
webdunia

ಅಭಿಮಾನಿಗಳ ಒತ್ತಡಕ್ಕೆ ಮಣಿದು ಕುರುಕ್ಷೇತ್ರದ ಮತ್ತೊಂದು ಟ್ರೈಲರ್ ರಿಲೀಸ್

ಅಭಿಮಾನಿಗಳ ಒತ್ತಡಕ್ಕೆ ಮಣಿದು ಕುರುಕ್ಷೇತ್ರದ ಮತ್ತೊಂದು ಟ್ರೈಲರ್ ರಿಲೀಸ್
ಬೆಂಗಳೂರು , ಬುಧವಾರ, 24 ಜುಲೈ 2019 (09:01 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದುರ್ಯೋಧನನಾಗಿ ಕಾಣಿಸಿಕೊಂಡಿರುವ ಬಹುತಾರಾಗಣವಿರುವ ಕುರುಕ್ಷೇತ್ರ ಸಿನಿಮಾದ ಟ್ರೈಲರ್ ಬಗ್ಗೆ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು.


ಟ್ರೈಲರ್ ನಲ್ಲಿ ಏನೂ ಇಲ್ಲ. ಎಲ್ಲಾ ನಟರನ್ನು ಕಾಣುತ್ತಿಲ್ಲ. ಇಷ್ಟೊಂದು ಅದ್ಧೂರಿ ಸಿನಿಮಾಗೆ ಸಪ್ಪೆ ಟ್ರೈಲರ್ ಎಂದು ಅಭಿಮಾನಿಗಳು ಈ ಮೊದಲು ಬಿಡುಗಡೆಯಾದ ಟ್ರೈಲರ್ ನೋಡಿ ನಿರಾಸೆ ವ್ಯಕ್ತಪಡಿಸಿದ್ದರು.

ಕೊನೆಗೂ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಚಿತ್ರತಂಡ ಮತ್ತೊಂದು ಟ್ರೈಲರ್ ಬಿಡುಗಡೆ ಮಾಡಲು ನಿರ್ಧರಿಸಿದೆ. ಇಂದು ಮಧ್ಯಾಹ್ನ 2 ಗಂಟೆಗೆ ಚಿತ್ರ ತಂಡ ಮತ್ತೊಂದು ಟ್ರೈಲರ್ ಬಿಡುಗಡೆ ಮಾಡಲಿದ್ದು, ಈ ಟ್ರೈಲರ್ ಆದರೂ ಅಭಿಮಾನಿಗಳ ನಿರಾಸೆ ಮರೆಸಬಹುದು ಎಂಬ ನಿರೀಕ್ಷೆ ಚಿತ್ರತಂಡದ್ದು. ಆಗಸ್ಟ್ 2 ರಂದು ಕುರುಕ್ಷೇತ್ರ ಸಿನಿಮಾ ಬಿಡುಗಡೆಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾಹಸ ಸಿಂಹ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಸೀರಿಯಲ್ ಗೆ ಎಂಟ್ರಿ